ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ,ಪತ್ನಿಗೆ ಕಡಿಮೆ ದರದಲ್ಲಿ ಟಿಕೆಟ್ ನೀಡಿ ಉಚಿತವಾಗಿ ಮೇಲ್ದರ್ಜೆಗೆ ಏರಿಸಿದ ಏರ್ ಇಂಡಿಯ

Update: 2022-05-14 13:32 GMT
ರಾಜೀವ್ ಬನ್ಸಾಲ್ (PTI)

ಹೊಸದಿಲ್ಲಿ: ಮೇ 7ರಂದು ಅಮೆರಿಕಾಗೆ ಖಾಸಗಿ ಭೇಟಿಯಂಗವಾಗಿ ತೆರಳಿದ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ರಾಜೀವ್ ಬನ್ಸಾಲ್ ಮತ್ತವರ ಪತ್ನಿಯ ವಿಮಾನ ಟಿಕೆಟ್ ಅನ್ನು ಇಕಾನಮಿ ಕ್ಲಾಸ್‍ನಿಂದ ಬಿಸಿನೆಸ್ ಕ್ಲಾಸ್‍ಗೆ ಮೇಲ್ದರ್ಜೆಗೇರಿಸಲಾಗಿತ್ತು ಎಂದು Indian Express ವರದಿ ಮಾಡಿದೆ. 

ಏರ್ ಇಂಡಿಯಾವನ್ನು ಖಾಸಗೀಕರಣಗೊಳಿಸಲಾಗಿರುವ ಹೊರತಾಗಿಯೂ ಸರಕಾರಿ ಅಧಿಕಾರಿಯೊಬ್ಬರಿಗೆ ಈ ವಿಶೇಷ ಸವಲತ್ತು ಹಲವರ ಹುಬ್ಬೇರಿಸಿದೆ.

ಬನ್ಸಾಲ್ ದಂಪತಿಯ ಟಿಕೆಟ್‍ಗಳನ್ನು ಮೇಲ್ದರ್ಜೆಗೇರಿಸಲಾಗಿರುವ ಹೊರತಾಗಿ ಅವರು ಮೂಲತಃ ಖರೀದಿಸಿದ್ದ ಇಕಾನಮಿ ಕ್ಲಾಸ್ ಟಿಕೆಟ್‍ಗೆ ಅವರು ತೆತ್ತ ದರಗಳು ಇತರ ಸಹ ಪ್ರಯಾಣಿಕರು ತೆರುವ ದರಕ್ಕಿಂತಲೂ ಕಡಿಮೆಯಾಗಿದೆ.

1988 ಬ್ಯಾಚಿನ ಐಎಎಸ್ ಅಧಿಕಾರಿಯಾಗಿರುವ ಬನ್ಸಾಲ್ ಅವರನ್ನು ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿಯನ್ನಾಗಿ ಕಳೆದ ವರ್ಷದ ಸೆಪ್ಟೆಂಬರ್ 22ರಂದು ನೇಮಕಗೊಳಿಸಲಾಗಿತ್ತು. ಏರ್ ಇಂಡಿಯಾವನ್ನು ಸಂಪೂರ್ಣವಾಗಿ ಖಾಸಗೀಕರಣಗೊಳಿಸುವ ಸರಕಾರದ ನಿರ್ಧಾರದ ಮರುದಿನವೇ ಅವರನ್ನು ಈ ಹುದ್ದೆಗೆ ನೇಮಿಸಲಾಗಿತ್ತು, ಅವರು ಅಕ್ಟೋಬರ್ 1, 2021 ರಂದು ಅಧಿಕಾರ ವಹಿಸಿದ್ದರು ಈ ಹಿಂದೆ ಅವರು ಏರ್ ಇಂಡಿಯಾದ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು.

ಬನ್ಸಾಲ್ ದಂಪತಿ ನೇವಾರ್ಕ್, ನ್ಯೂಜೆರ್ಸಿಗೆ ವಿಮಾನವೇರುವು ಮುನ್ನಾ ದಿನ ಚೀಫ್ ಕಮರ್ಷಿಯಲ್ ಆಫೀಸರ್ ಅವರ ಕಚೇರಿಯಿಂದ ಒಂದು ಇಮೇಲ್ ಹಲವಾರು ಏರ್ ಇಂಡಿಯಾ ಅಧಿಕಾರಿಗಳಿಗೆ ಕಳುಹಿಸಲಾಗಿತ್ತಲ್ಲದೆ  ಬನ್ಸಾಲ್ ದಂಪತಿಯನ್ನು ಭೇಟಿಯಾಗಿ ಸಹಾಯ ಮಾಡುವಂತೆ ಹಾಗೂ ಅವರಿಗೆ ಬಿಸಿನೆಸ್ ಕ್ಲಾಸ್‍ಗೆ ಮೇಲ್ದರ್ಜೆಗೇರಿಸಲು ಸೀಟುಗಳು ಲಭ್ಯವಿದ್ದರೆ ಕ್ರಮಕೈಗೊಳ್ಳುವಂತೆಯೂ ಸೂಚಿಸಲಾಗಿತ್ತು ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News