ಅಂಜುಮನ್ ಕಾಲೇಜು ವಿದ್ಯಾರ್ಥಿಗಳ ಪ್ರಾಜೆಕ್ಟ್ ರಾಜ್ಯ ವಿಜ್ಞಾನ, ತಂತ್ರಜ್ಞಾನ ಪರಿಷತ್ತಿಗೆ ಆಯ್ಕೆ

Update: 2022-05-15 12:40 GMT

ಭಟ್ಕಳ: ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಂಜುಮನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‍ಮೆಂಟ್‍ನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಸಿದ್ಧಗೊಳಿಸಿದ "ರಿಮೋಟ್ ಮಾನಿಟರಿಂಗ್ ಅಂಡ್ ಕಂಟ್ರೋಲಿಂಗ್ ಹೈಡ್ರೋಪೋನಿಕ್ಸ್ ಸಿಸ್ಟಂ" ಎಂಬ ಪ್ರಾಜೆಟ್ಟನ್ನು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್ತು (ಕೆಎಸ್‍ಸಿಎಸ್‍ಟಿ) ಆಯ್ಕೆ ಮಾಡಿರುವುದಾಗಿ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಭಟ್ಕಳದ ಅಂಜುಮನ್ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು "ರಿಮೋಟ್ ಮಾನಿಟರಿಂಗ್ ಅಂಡ್ ಕಂಟ್ರೋಲಿಂಗ್ ಹೈಡ್ರೋಪೋನಿಕ್ಸ್ ಸಿಸ್ಟಂ" ಎಂಬ ತಮ್ಮದೇ ಆದ ಯೋಜನೆಯನ್ನು ರಚಿಸಿದ್ದರು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು 2021-22 ನೇ ಸಾಲಿನ 45 ನೇ ಸರಣಿಯ ಅಡಿಯಲ್ಲಿ ವಿದ್ಯಾರ್ಥಿ ಯೋಜನೆಯನ್ನು ಆಯ್ಕೆ ಮಾಡಿದೆ. ಪರಿಷತ್ತಿನ ವಿದ್ಯಾರ್ಥಿ ಯೋಜನೆಯ ಪ್ರಾಯೋಜಕತ್ವವು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದಲ್ಲದೆ ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ.

ವಿಭಾಗದ ಶಿಕ್ಷಕರಾದ ಡಾ.ಟಿ.ಎಂ.ಪಿ.ರಾಜ್ ಕುಮಾರ್ ಮತ್ತು ಪ್ರೊ.ಸೊಹೈಲ್ ಶಾ ಅವರ ಮಾರ್ಗದರ್ಶನದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಮುಹಮ್ಮದ್, ಸೈಯದ್ ಫುಹೇರ್ ಬರ್ಮಾವರ್, ಸೈಯದ್ ಇಸ್ಮಾಯಿಲ್ ಮತ್ತು ಜಹೀರ್ ಯೋಜನೆ ರೂಪಿಸಿದ್ದಾರೆ.

ಈ ಸಂದರ್ಭದಲ್ಲಿ ಅಂಜುಮಾನ್-ಎ-ಹಾಮಿ ಮುಸ್ಲಿಮೀನ್ ಭಟ್ಕಳದ ಆಡಳಿತ ಮಂಡಳಿಯವರು, ಕಾಲೇಜು ಪ್ರಾಂಶುಪಾಲರು, ಶಿಕ್ಷಕರು ಹಾಗೂ ಸಹಪಾಠಿಗಳು ಅಭಿನಂದಿಸಿ ಶುಭ ಹಾರೈಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News