ಉಕ್ರೇನ್ ಸೇನೆ ಸೇರಿದ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದ ಮಹಿಳಾ ಶೂಟರ್

Update: 2022-05-15 17:18 GMT

ಕೀವ್, ಮೇ 16: ಒಲಿಂಪಿಕ್ಸ್ ಚಿನ್ನದ ಪದಕ ಗೆದ್ದಿರುವ ಉಕ್ರೇನ್‌ನ ಖ್ಯಾತ ಮಹಿಳಾ ಶೂಟರ್ ಕ್ರಿಸ್ತಿನಾ ಡಿಮಿಟ್ರೆಂಕೊ ಇದೀಗ ರಶ್ಯ ವಿರುದ್ಧದ ಯುದ್ಧದಲ್ಲಿ ತಮ್ಮ ದೇಶದ ಸೇನಾಪಡೆಗೆ ಸೇರ್ಪಡೆಗೊಳ್ಳಲು ಬಯಸಿರುವುದಾಗಿ ಹೇಳಿದ್ದಾರೆ.

2016ರ ಯುವ ಒಲಿಂಪಿಕ್ಸ್‌ ಬಯಥ್ಲಾನ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿರುವ 22 ವರ್ಷದ ಕ್ರಿಸ್ತಿನಾ, ಇದೀಗ ತನ್ನ ತಾಯ್ನಾಡಿನ ಪರ ಯುದ್ಧಭೂಮಿಯಲ್ಲಿ ಸೇವೆ ಸಲ್ಲಿಸಲು ಮುಂದಾಗಿದ್ದಾರೆ. ಬಯಾಥ್ಲಾನ್‌ನ್ಲಿ ಕ್ರಾಸ್ಕಂಟ್ರಿ ಓಟ ಮತ್ತು ರೈಫಲ್ ಶೂಟಿಂಗ್ ಸ್ಪರ್ಧೆ ಸೇರಿದೆ.
ಫೆಬ್ರವರಿ 27ರಂದು ಸ್ವಿಝುರ್ಲ್ಯಾಂಡ್‌ಗೆ ಮತ್ತು ಅಲ್ಲಿಂದ ಇಟಲಿಗೆ ತೆರಳಿ ಅಂತರಾಷ್ಟ್ರೀಯ ಬಯಾಥ್ಲಾನ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಕ್ರಿಸ್ತಿನಾ ಸಿದ್ಧತೆ ನಡೆಸಿದ್ದರು. ಆದರೆ ಆಗ ಉಕ್ರೇನ್ ಮೇಲೆ ರಶ್ಯಾ ದಾಳಿ ಆರಂಭವಾಗಿದ್ದರಿಂದ ಸ್ಪರ್ಧೆಯ ಯೋಜನೆಯಿಂದ ಹಿಂದೆ ಸರಿದು, ಉಕ್ರೇನ್‌ನ ನ್ಯಾಷನಲ್ ಗಾರ್ಡ್‌ಗೆ ಸೇರ್ಪಡೆಗೊಳ್ಳಲು ಅರ್ಜಿ ಸಲ್ಲಿಸಿದ್ದರು. ನಿಪುಣ ಶೂಟರ್ ಆಗಿರುವ ಅವರು ಆಯ್ಕೆಯಾಗಿದ್ದು ರಶ್ಯ ವಿರುದ್ಧದ ಯುದ್ಧದಲ್ಲಿ ಪಾಲ್ಗೊಳ್ಳುವುದನ್ನು ಕಾತರದಿಂದ ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News