ಅಮೆರಿಕ: ಮೇ 17ರಂದು 'ಹಾರುವ ತಟ್ಟೆಗಳ' ಕುರಿತ ಸಾರ್ವಜನಿಕ ವಿಚಾರಣೆ ನಡೆಸಲಿರುವ ಅಮೆರಿಕಾ ಸಂಸತ್ತು

Update: 2022-05-15 17:21 GMT

ವಾಷಿಂಗ್ಟನ್, ಮೇ 15: ಗುರುತಿಸಲಾಗದ ಹಾರುವ ವಸ್ತುಗಳು(ಯುಎಫ್ಒ) ಕುರಿತು 50 ವರ್ಷಗಳಲ್ಲೇ ಪ್ರಥಮ ಸಾರ್ವಜನಿಕ ವಿಚಾರಣೆಯನ್ನು ಅಮೆರಿಕದ ಸಂಸತ್ತು ಮೇ 17ರಂದು ನಡೆಸಲಿದೆ ಎಂದು ಸಿಎನ್ಎನ್ ವರದಿ ಮಾಡಿದೆ.

 ಸದನದ ಗುಪ್ತಚರ ಸಮಿತಿಯ ಭಯೋತ್ಪಾದನೆ ನಿಗ್ರಹ, ಗುಪ್ತಚರ ನಿಗ್ರಹ ಮತ್ತು ಪ್ರಸರಣ ನಿಗ್ರಹ ಉಪಸಮಿತಿಯು ಯುಎಫ್ಒ ಕುರಿತು ಬೆಳಕು ಚೆಲ್ಲುವ ನಿಟ್ಟಿನಲ್ಲಿ ಮುಕ್ತ ವಿಚಾರಣೆ ನಡೆಸಲಿದೆ. ಇಂಡಿಯಾನಾ ಕ್ಷೇತ್ರದ ಸಂಸದ ಆ್ಯಂಡ್ರೆ ಕಾರ್ಸನ್ ವಿಚಾರಣೆ ಕಲಾಪದ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸತ್ತು ಕಳೆದ 50 ವರ್ಷದಲ್ಲಿ ಯುಎಫ್ಒ ಕುರಿತು ಸಾರ್ವಜನಿಕ ವಿಚಾರಣೆ ನಡೆಸಿಲ್ಲ. ಅಮೆರಿಕನ್ನರು ಈ ವಿವರಿಸಲಾಗದ ಘಟನೆಯ ಬಗ್ಗೆ ಇನ್ನಷ್ಟು ತಿಳಿದಿಕೊಳ್ಳಬೇಕಾಗಿದೆ ಎಂದು ಕಾರ್ಸನ್ ಹೇಳಿದ್ದಾರೆ.

ಅಮೆರಿಕದ ಭದ್ರತೆ ಮತ್ತು ರಕ್ಷಣಾ ವಿಭಾಗದ ಅಧೀನ ಕಾರ್ಯದರ್ಶಿ ರೊನಾಲ್ಡ್ ಮೌಟ್ರಿ, ನೌಕಾಪಡೆ ಗುಪ್ತಚರ ವಿಭಾಗದ ಉಪ ನಿರ್ದೇಶಕ ಸ್ಕಾಟ್ ಬ್ರೆ ವಿಚಾರಣೆ ಸಂದರ್ಭ ಉಪಸ್ಥಿತರಿರುತ್ತಾರೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News