ಉ.ಕ.ಜಿಲ್ಲಾ ಮಟ್ಟದ ಸೀರತ್ ಪ್ರಬಂಧ ಸ್ಪರ್ಧೆ; ಶಿರಸಿಯ ರಾಜೇಶ್ವರಿ ಹೆಗಡೆ ಪ್ರಥಮ
ಭಟ್ಕಳ: ಪ್ರವಾದಿ ಮುಹಮ್ಮದ್ ಪೈಗಂಬರ್ ಜನ್ಮ ದಿನಾಚರಣೆಯ ನಿಮಿತ್ತ ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆ ಆಯೋಜಿಸಿದ್ದ ಉ.ಕ. ಜಿಲ್ಲಾ ಮಟ್ಟದ ಸೀರತ್ ಪ್ರಬಂಧ ಸ್ಪರ್ಧೆ-2022 ಇದರ ಫಲಿತಾಂಶ ಪ್ರಕಟಗೊಂಡಿದ್ದು ಶಿರಸಿಯ ಸರ್ಕಾರಿ ಪ್ರಾಥಮಿಕ ಶಾಲೆ ಗಾಂಧಿನಗರ ಇದರ ಶಿಕ್ಷಕಿ ರಾಜೇಶ್ವರಿ ಹೆಗಡೆ ಪ್ರಥಮ ಬಹುಮನ ಪಡೆದುಕೊಂಡಿದ್ದಾರೆ ಎಂದು ಸೀರತ್ ಸ್ಪರ್ಧೆಯ ಸಂಚಾಲಕ ಎಂ.ಆರ್. ಮಾನ್ವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಟ್ಕಳದ ಪ್ರಾಥಮಿಕ ಶಾಲಾ ಶಿಕ್ಷಕ ರಾಘವೇಂದ್ರ ಮಡಿವಾಳ ದ್ವಿತೀಯಾ ಸ್ಥಾನ ಪಡೆದುಕೊಂಡಿದ್ದು, ಗೋಕರ್ಣದ ಸಂಗೀತಾ ಶೆಟ್ಟಿ ತೃತೀಯಾ ಬಹುಮಾನ ಪಡೆದುಕೊಂಡಿದ್ದಾರೆ.
ಮೇ 18ರಂದು ಸಂಜೆ 5 ಗಂಟೆಗೆ ಭಟ್ಕಳದ ಅನ್ಫಾಲ್ ಹೈಪರ್ ಮಾರ್ಕೆಟ್ ಬಳಿಯ ಆಮೀನಾ ಪ್ಯಾಲೆಸ್ ನಲ್ಲಿ ನಡೆಯುವ “ಹಿಂದೂ ಮುಸ್ಲಿಮ್ ಸೌಹಾರ್ದ ಸಂಜೆ-2022” ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ ಮಾಡಲಾಗುವುದೆಂದು ಅವರು ತಿಳಿಸಿದ್ದಾರೆ.
ಶಿರಸಿಯ ವಿದ್ಯಾಧರ್ ಶಾನು ಮಧುಕರ್, ಭಟ್ಕಳದ ನ್ಯೂ ಇಂಗ್ಲಿಷ್ ಪಿಯು ಕಾಲೇಜಿನ ವಿದ್ಯಾರ್ಥಿನಿ ನಿಖಿತಾ ಮೊಗೇರ್, ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯ ವಿದ್ಯಾರ್ಥಿಗಳಾದ ಆಶಾ ಶಿರಿಲ್ ಡಿ’ಸೋಜಾ, ಸ್ವಾತಿ ಖಾರ್ವಿ ಹಾಗೂ ಸಿದ್ದಾಪುರದ ವಸೀಮಾ ಬಾನು ಸಮಾಧಾನಕರ ಬಹುಮಾನ ಪಡೆದುಕೊಂಡಿದ್ದಾರೆ.