ತಾಜ್‌ ಮಹಲ್‌ ನ ತಳ ಅಂತಸ್ತಿನ ಕೊಠಡಿಗಳ ಚಿತ್ರಗಳನ್ನು ಪ್ರಕಟಿಸಿದ ಭಾರತೀಯ ಪುರಾತತ್ವ ಸಮೀಕ್ಷೆ ಇಲಾಖೆ

Update: 2022-05-16 16:43 GMT

ಹೊಸದಿಲ್ಲಿ: ಆರು ದಿನಗಳ ಹಿಂದೆ, ತಾಜ್ ಮಹಲ್‌ನ ನೆಲಮಾಳಿಗೆಯಲ್ಲಿರುವ 22 ಬೀಗ ಹಾಕಿದ ಕೋಣೆಗಳ ಕುರಿತಾದ ವಿವಾದವು ಉಲ್ಬಣಗೊಳ್ಳುತ್ತಿದ್ದಂತೆಯೇ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಈ ಕೊಠಡಿಗಳ ಕೆಲವು ಛಾಯಾಚಿತ್ರಗಳನ್ನು ಬಿಡುಗಡೆ ಮಾಡಿದೆ.

ಮೇ 12 ರಂದು, ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠವು ತಾಜ್ ಮಹಲ್‌ನ “ಇತಿಹಾಸ”ದ ಬಗ್ಗೆ ಸತ್ಯಶೋಧನೆಯ ತನಿಖೆಯನ್ನು ಕೋರುವ ಅರ್ಜಿಯನ್ನು ತಿರಸ್ಕರಿಸಿತ್ತು ಮತ್ತು "ಇಂತಹಾ ವಿಚಾರಣೆಗಳನ್ನು ಕೈಗೆತ್ತಿಕೊಂಡರೆ ಮುಂದೆ ನ್ಯಾಯಾಧೀಶರ ಕೊಠಡಿಗೆ ಪ್ರವೇಶಿಸಲೂ ಅನುಮತಿ ಕೇಳುವಂತಾಗಬಹುದು" ಎಂದು ಪ್ರಕರಣವನ್ನು ತಳ್ಳಿಹಾಕಲಾಗಿತ್ತು. 

ಬಿಜೆಪಿಯ ಅಯೋಧ್ಯೆ ಮಾಧ್ಯಮ ಘಟಕದ ಉಸ್ತುವಾರಿ ರಜನೀಶ್ ಸಿಂಗ್ ಎಂಬಾತ ಲಕ್ನೋ ಪೀಠದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು, ತಾಜ್ ಮಹಲ್ ತೇಜೋ ಮಹಾಲಯ ಎಂದು ಕರೆಯಲ್ಪಡುವ ಶಿವ ದೇವಾಲಯವಾಗಿದೆ ಎಂದು ಪ್ರತಿಪಾದಿಸಿದ್ದು, ಸರ್ಕಾರವು ಸತ್ಯಶೋಧನಾ ಸಮಿತಿಯನ್ನು ರಚಿಸುವಂತೆ ಕೇಳಿಕೊಂಡಿದ್ದರು.

ನ್ಯಾಯಾಲಯದ ಆದೇಶದ ನಂತರ, ASI ಅಧಿಕಾರಿಗಳು, "ಆ ಕೊಠಡಿಗಳಲ್ಲಿ ಯಾವುದೇ ರಹಸ್ಯವಿಲ್ಲ, ಅವು ಕೇವಲ ರಚನೆಯ ಭಾಗವಾಗಿದೆ. ಅದಕ್ಕೆ ತಾಜ್‌ಮಹಲ್‌ ನಂತೆ ಯಾವುದೇ ವಿಶಿಷ್ಟತೆಯಿಲ್ಲ" ಎಂದು ಹೇಳಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News