ಕುಂದಾಪುರ: ರಾಜ್ಯಕ್ಕೆ ಟಾಪರ್ ನಿಶಾಗೆ ವೈದ್ಯೆ ಆಗುವ ಕನಸು

Update: 2022-05-19 14:55 GMT

ಕುಂದಾಪುರ, ಮೇ ೧೯: ಕುಂದಾಪುರ ತಾಲೂಕಿನ ಗ್ರಾಮೀಣ ಭಾಗವಾದ ಕಾಳಾವರ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ, ಬಟ್ಟೆ ವ್ಯಾಪಾರಿಯ ಮಗಳು ನಿಶಾ 625 ಅಂಕ ಪಡೆದು ಎಸೆಸೆಲ್ಸಿಯಲ್ಲಿ ಟಾಪರ್ ಆಗಿದ್ದಾರೆ.

ಈಕೆ ಕಾಳಾವರ ಸಳ್ವಾಡಿ ನಿವಾಸಿ ಶ್ರೀನಿವಾಸ ಜೋಗಿ ಹಾಗೂ ಆಶಾ ದಂಪತಿ ಪುತ್ರಿ. ತಂದೆ ಸಣ್ಣ ಪ್ರಮಾಣದ ಬಟ್ಟೆ ವ್ಯಾಪಾರಿಯಾಗಿದ್ದು ತಾಯಿ ಗೃಹಿಣಿ. 9ನೇ ತರಗತಿ ಓದುತ್ತಿರುವ ಸಹೋದರಿ ಮತ್ತು ಅಜ್ಜ ಅಜ್ಜಿ ಜೊತೆ ನಿಶಾ ವಾಸ ವಾಗಿದ್ದಾರೆ. ಮನೆಯಿಂದ ಅನತಿ ದೂರ ನಡೆದು ಸಾಗಿ ಬಳಿಕ ೨ ಕಿ.ಮೀ ದೂರ ಬಸ್ಸಿನಲ್ಲಿ ಶಾಲೆಗೆ ಹೋಗಿ ಬರುತ್ತಿದ್ದರು.

ಬೆಳಗ್ಗೆ ಹಾಗೂ ಸಂಜೆ ಸಹಿತ ಬಿಡುವಿನ ವೇಳೆ ಓದುವ ಜೊತೆಗೆ ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್ ಪಡೆದಿದ್ದಾರೆ. ಅಲ್ಲದೆ ಯಕ್ಷಗಾನ ಕಲಿಯುತ್ತಿದ್ದು ವೇಷ ಕೂಡ ಮಾಡಿದ್ದಾರೆ.

‘625 ಅಂಕದಲ್ಲಿ ಒಂದೆರಡು ಅಂಕ ಕಳೆದುಕೊಳ್ಳುವ ಭಯವಿತ್ತು. 625 ಅಂಕ ಪಡೆದಿದ್ದಕ್ಕೆ ತುಂಬಾ ಸಂತಸವಾಗಿದೆ. ಮುಂದೆ ವಿಜ್ಞಾನ ವಿಭಾಗದಲ್ಲಿ ಓದಿ ವೈದ್ಯ ಆಗಬೇಕೆಂಬ ಗುರಿ ಹೊಂದಿದ್ದೇನೆ’ ಎಂದು ನಿಶಾ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News