ದಿಲ್ಲಿ ಸರಕಾರದ ಮನೆಬಾಗಿಲಿಗೆ ಪಡಿತರ ಯೋಜನೆಯನ್ನು ತಳ್ಳಿಹಾಕಿದ ಹೈಕೋರ್ಟ್

Update: 2022-05-19 15:56 GMT
photo:twitter

ಹೊಸದಿಲ್ಲಿ,ಮೇ 19: ಮನೆಬಾಗಿಲಿಗೆ ಪಡಿತರವನ್ನು ವಿತರಿಸುವ ದಿಲ್ಲಿಯ ಆಪ್ ಸರಕಾರದ ‘ಮುಖ್ಯಮಂತ್ರಿ ಘರ್ ಘರ್ ರೇಷನ್ ಯೋಜನೆ ’ಯನ್ನು ದಿಲ್ಲಿ ಉಚ್ಚ ನ್ಯಾಯಾಲಯವು ಗುರುವಾರ ತಳ್ಳಿಹಾಕಿದೆ. ದಿಲ್ಲಿ ಸರಕಾರವು ಮನೆಬಾಗಿಲಿಗೆ ಪಡಿತರವನ್ನು ವಿತರಿಸುವ ಇನ್ನೊಂದು ಯೋಜನೆಯನ್ನು ತರಲು ಸ್ವತಂತ್ರವಾಗಿದೆ,ಆದರೆ ಈ ಯೋಜನೆಗಾಗಿ ಅದು ಕೇಂದ್ರ ಸರಕಾರವು ಒದಗಿಸುವ ಧಾನ್ಯಗಳನ್ನು ಬಳಸುವಂತಿಲ್ಲ ಎಂದು ಪ್ರಭಾರಿ ಮುಖ್ಯ ನ್ಯಾಯಾಧೀಶ ವಿಪಿನ್ ಸಾಂಘಿ ಮತ್ತು ನ್ಯಾ.ಜಸ್ಮೀತ್ ಸಿಂಗ್ ಅವರ ಪೀಠವು ತಿಳಿಸಿತು.

ದಿಲ್ಲಿ ಸರಕಾರಿ ಪಡಿತರ ವಿತರಕರ ಸಂಘ ಮತ್ತು ದಿಲ್ಲಿ ಪಡಿತರ ವಿತರಕರ ಒಕ್ಕೂಟ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ನಡೆಸಿದ ಉಚ್ಚ ನ್ಯಾಯಾಲಯವು ಜ.10ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News