ಎಸೆಸೆಲ್ಸಿ: ಶ್ರೀಅನಂತೇಶ್ವರ ಪ್ರೌಢಶಾಲೆಗೆ ಶೇ.100 ಫಲಿತಾಂಶ

Update: 2022-05-20 16:14 GMT
ಪ್ರಮಥ್ ಭಾಗವತ್
 

ಉಡುಪಿ, ಮೇ ೨೦: ಉಡುಪಿಯ ವಿದ್ಯೋದಯ ಟ್ರಸ್ಟ್‌ನ ಅಂಗಸಂಸ್ಥೆಯಾದ ಶ್ರೀ ಅನಂತೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ೨೦೨೧-೨೨ನೇ ಶೈಕ್ಷಣಿಕ ವರ್ಷದ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.೧೦೦ ಫಲಿತಾಂಶ ದಾಖಲಿಸಿದೆ. 

ಈ ಬಾರಿ ೫೬ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದು, ೩೧ ವಿದ್ಯಾರ್ಥಿಗಳು ‘ಎ+’ ಶ್ರೇಣಿಯಲ್ಲಿ, ೨೦ ಮಂದಿ ‘ಎ’ ಶ್ರೇಣಿಯಲ್ಲಿ ಮತ್ತು ಐವರು ವಿದ್ಯಾರ್ಥಿ ಗಳು ‘ಬಿ+’ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯಿನಿ ಸಂಧ್ಯಾ ಕಾರ್ನಾಡ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಾಲೆಯಲ್ಲಿ ಪ್ರಮಥ್ ಭಾಗವತ್ ಕೆ. ಸಂಸ್ಕೃತದಲ್ಲಿ ೧೨೫, ಇಂಗ್ಲೀಷ್ ೯೮, ಕನ್ನಡ ೯೮ ಮತ್ತು ಗಣಿತದಲ್ಲಿ ೧೦೦, ವಿಜ್ಞಾನ ೧೦೦ ಹಾಗೂ ಸಮಾಜಶಾಸ್ತ್ರದಲ್ಲಿ ೧೦೦ ಹೀಗೆ ಒಟ್ಟು ೬೨೧ ಅಂಕಗಳಿಸಿ ಶಾಲೆಗೆ ಅಗ್ರಸ್ಥಾನಿಯಾಗಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News