ದಲಾಯಿ ಲಾಮಾರನ್ನು ಭೇಟಿಯಾಗಿ ಅಮೆರಿಕಾ ತನ್ನ ಬದ್ಧತೆಯನ್ನು ಉಲ್ಲಂಘಿಸಿದೆ: ಚೀನಾ ಆಕ್ರೋಶ

Update: 2022-05-20 16:56 GMT
PHOTO CREDIT: AFP

ಬೀಜಿಂಗ್, ಮೇ 20: ಅಮೆರಿಕದ ಹಿರಿಯ ರಾಜತಾಂತ್ರಿಕರು 14ನೇ ದಲಾಯಿ ಲಾಮಾರನ್ನು ಭೇಟಿ ಮಾಡಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಚೀನಾ, ಇದು ಟಿಬೆಟ್ ಚೀನಾದ ಭಾಗ ಎಂಬ ನಿಲುವಿಗೆ ಅಮೆರಿಕದ ಬದ್ಧತೆಯ ಉಲ್ಲಂಘನೆಯಾಗಿದೆ ಎಂದಿದೆ.
 
ಟಿಬೆಟ್‌ನ ಆಧ್ಯಾತ್ಮಕ ಗುರು ಲಾಮಾರನ್ನು ಪ್ರತ್ಯೇಕತಾವಾದಿ ಎಂದು ಚೀನಾದ ವಿದೇಶಾಂಗ ಇಲಾಖೆಯ ಹೇಳಿಕೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದ್ದು, ಟಿಬೆಟಿಯನ್ ವ್ಯವಹಾರಕ್ಕೆ ಸಂಬಂಧಿಸಿ ವಿಶೇಷ ಅಧಿಕಾರಿಯನ್ನು ನೇಮಿಸುವ ಮೂಲಕ ಅಮೆರಿಕವು ಚೀನಾದ ಆಂತರಿಕ ವ್ಯವಹಾರದಲ್ಲಿ ಹಸ್ತಕ್ಷೇಪ ನಡೆಸಿದೆ.ಟಿಬೆಟ್‌ನ ಪ್ರತ್ಯೇಕತಾವಾದಿಯನ್ನು ಬೆಂಬಲಿಸುವುದಿಲ್ಲ ಎಂಬ ಅಮೆರಿಕದ ಬದ್ಧತೆಯ ಉಲ್ಲಂಘನೆಯಾಗಿದೆ ಎಂದು ಉಲ್ಲೇಖಿಸಲಾಗಿದೆ. ಟಿಬೆಟ್ ವ್ಯವಹಾರಕ್ಕೆ ಸಂಬಂಧಿಸಿದ ಅಮೆರಿಕದ ವಿಶೇಷ ಸಂಯೋಜಕಿ ಉಝ್ರೆ ಝೆಯಾ ಗುರುವಾರ ದಲಾಯಿ ಲಾಮಾರನ್ನು ಭೇಟಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News