ಗೂಢಚಾರಿಕೆ ಆರೋಪದಲ್ಲಿ ಯೆಮನ್‌ ನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಪತ್ರಕರ್ತರ ಬಿಡುಗಡೆಗೆ ಆಮ್ನೆಸ್ಟಿ ಆಗ್ರಹ

Update: 2022-05-20 17:09 GMT
PHOTO:AFP

ದುಬೈ, ಮೇ 20: ಗೂಢಚಾರಿಕೆಯ ಆರೋಪದಲ್ಲಿ ಯೆಮನ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ನಾಲ್ವರು ಪತ್ರಕರ್ತರನ್ನು ಬಿಡುಗಡೆಗೊಳಿಸುವಂತೆ ಹೌದಿ ಬಂಡುಗೋರರನ್ನು ಆಮ್ನೆಸ್ಟಿ ಇಂಟರ್ನ್ಯಾಷನಲ್ ಶುಕ್ರವಾರ ಆಗ್ರಹಿಸಿದೆ.

‌ಯೆಮನ್ ನ ಪತ್ರಕರ್ತರಾದ ಅಬ್ದುಲ್ ಖಾಲೀಖ್ ಅಮ್ರಾನ್, ತೌಫಿಕ್ ಅಲ್ ಮನ್ಸೂರಿ, ಹಾರಿಸ್ ಹಮೀದ್ ಮತ್ತು ಅಕ್ರಮ್ ಅಲ್ ವಲೀದಿಯನ್ನು 2015ರ ಜೂನ್‌ನಲ್ಲಿ ಯೆಮನ್ ನ ರಾಜಧಾನಿ ಸನಾದಲ್ಲಿ ಹೌದಿ ಬಂಡುಗೋರರು ವಶಕ್ಕೆ ಪಡೆದಿದ್ದರು. ಬಳಿಕ ಗೂಢಚಾರಿಕೆಯ ಆರೋಪದಲ್ಲಿ ಇವರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು. ಈ ನಾಲ್ವರು ಮರಣದಂಡನೆ ಶಿಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ಅಪೀಲು ನ್ಯಾಯಾಲಯದಲ್ಲಿ ರವಿವಾರ ನಡೆಯಲಿದೆ.

ಪಕ್ಷಪಾತ ಮತ್ತು ಅನ್ಯಾಯದ ವಿಚಾರಣೆಯ ಬಳಿಕ ಮರಣದಂಡನೆಗೆ ಗುರಿಯಾಗಿರುವ 4 ಪತ್ರಕರ್ತರ ಗಲ್ಲುಶಿಕ್ಷೆ ರದ್ದತಿಗೆ ಯೆಮನ್ನ ಹೌದಿ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಮ್ನೆಸ್ಟಿ ಇಂಟರ್ನ್ಯಾಷನಲ್ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News