ನಿಥಾರಿ ಹತ್ಯಾಕಾಂಡ: ಪ್ರಧಾನ ಆರೋಪಿಗೆ ಮರಣದಂಡನೆ ವಿಧಿಸಿದ ವಿಶೇಷ ಸಿಬಿಐ ನ್ಯಾಯಾಲಯ

Update: 2022-05-20 18:32 GMT

ಹೊಸದಿಲ್ಲಿ, ಮೇ 20: ನಿಥಾರಿ ಹತ್ಯಾಕಾಂಡದ ಪ್ರಧಾನ ಆರೋಪಿ ಸುರಿಂದರ್ ಕೋಲಿಗೆ ಗಾಝಿಯಾಬಾದ್ನ ವಿಶೇಷ ಸಿಬಿಐ ನ್ಯಾಯಾಲಯ ಮರಣ ದಂಡನೆ ವಿಧಿಸಿದೆ. ಸುರಿಂದರ್ ಕೋಲಿಯ ವಿರುದ್ಧದ ಹತ್ಯೆ ಆರೋಪಕ್ಕೆ ಸಂಬಂಧಿಸಿ ನ್ಯಾಯಾಲಯ ಮರಣ ದಂಡನೆ ವಿಧಿಸಿದೆ.

ಪ್ರಕರಣದಲ್ಲಿ ಆತನ ಉದ್ಯೋಗದಾತನಾಗಿದ್ದ ಮೋನಿಂದರ್ ಸಿಂಗ್ ಪಂಧೇರ್ಗೆ ನ್ಯಾಯಾಧೀಶರು 7 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿದ್ದಾರೆ. ಅಲ್ಲದೆ, ಕೋಲಿಗೆ 62,000 ರೂ. ದಂಡ ಹಾಗೂ ಪಂಧೇರ್ಗೆ 4,000 ರೂ. ದಂಡ ವಿಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 18 ವರ್ಷಗಳ ಹಿಂದೆ ಆರೋಪಿಗಳ ಮನೆಯ ಹಿಂಬಾಗದ ಚರಂಡಿಯಲ್ಲಿ ನೋಯ್ಡಾ ಪೊಲೀಸರು ಮಾನವನ ಅವಶೇಷಗಳನ್ನು ಪತ್ತೆ ಮಾಡಿದ ಬಳಿಕ ಈ ಹತ್ಯಾಕಾಂಡ ಬೆಳಕಿಗೆ ಬಂದಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News