ಶೀನಾ ಬೋರಾ ಹತ್ಯೆ ಪ್ರಕರಣ: ಕಾರಾಗೃಹದಿಂದ ಬಿಡುಗಡೆಯಾದ ಇಂದ್ರಾಣಿ ಮುಖರ್ಜಿ

Update: 2022-05-20 18:33 GMT

ಮುಂಬೈ, ಮೇ 20: ತನ್ನ ಪುತ್ರಿ ಶೀನಾ ಬೋರಾಳನ್ನು ಹತ್ಯೆಗೈದ ಆರೋಪದಲ್ಲಿ ಬಂಧಿತರಾದ 6 ವರ್ಷ ಹಾಗೂ 9 ತಿಂಗಳುಗಳ ಬಳಿಕ ಮಾಜಿ ಮಾಧ್ಯಮ ಕಾರ್ಯನಿರ್ವಹಣಾಧಿಕಾರಿ ಇಂದ್ರಾಣಿ ಮುಖರ್ಜಿ ಶುಕ್ರವಾರ ಇಲ್ಲಿನ ಬೈಕುಲಾದಲ್ಲಿರುವ ಮಹಿಳಾ ಕಾರಾಗೃಹದಿಂದ ಬಿಡುಗಡೆಯಾಗಿದ್ದಾರೆ. ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇಂದ್ರಾಣಿಗೆ ಸುಪ್ರೀಂ ಕೋರ್ಟ್ ಬುಧವಾರ ಜಾಮೀನು ಮಂಜೂರು ಮಾಡಿತ್ತು. ಸಂಜೆ 5.30ಕ್ಕೆ ಅವರು ಕಾರಾಗೃಹದಿಂದ ಬಿಡುಗಡೆಯಾದರು ಹಾಗೂ ಕಾರಿನಲ್ಲಿ ತೆರಳಿದರು. ಈ ಸಂದರ್ಭ ಅವರ ವಕೀಲರು ಜೊತೆಗಿದ್ದರು. ಕಾರಾಗೃಹದಿಂದ ಹೊರಗೆ ಬರುತ್ತಿದ್ದಂತೆ ಇಂದ್ರಾಣಿ ಮಾಧ್ಯಮದವರನ್ನು ನೋಡಿ ಮುಗುಳ್ನಕ್ಕರು. 2 ಲಕ್ಷ ರೂಪಾಯಿ ಔಪಚಾರಿಕ ನಗದು ಬಾಂಡ್ ನೀಡುವಂತೆ ವಿಚಾರಣಾ ನ್ಯಾಯಾಲಯ ಗುರುವಾರ ಇಂದ್ರಾಣಿ ಅವರಿಗೆ ನಿರ್ದೇಶಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News