ಲಕ್ನೊ: ಕುಟುಂಬ,ಪೊಲೀಸರಿಗೆ ತಿಳಿಸದೆ ತಾಯಿಯ ಶವದೊಂದಿಗೆ 10 ದಿನ ಕಳೆದ ಯುವತಿ!

Update: 2022-05-21 09:38 GMT

ಲಕ್ನೊ: ಇಂದಿರಾ ನಗರದ ಮನೆಯೊಂದರಲ್ಲಿ ಯುವತಿಯೊಬ್ಬಳು ತನ್ನ ತಾಯಿಯ ಶವದೊಂದಿಗೆ 10 ದಿನಗಳ ಕಾಲ  ವಾಸ ಮಾಡಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.

 26 ವರ್ಷದ ಅಂಕಿತಾ ದೀಕ್ಷಿತ್ ಎಂದು ಗುರುತಿಸಲಾದ ಯುವತಿ ಒಂದು ಕೋಣೆಯಲ್ಲಿದ್ದರೆ, ಆಕೆಯ ತಾಯಿಯ ಶವ ಮತ್ತೊಂದು ಕೋಣೆಯಲ್ಲಿ ಬಿದ್ದುಕೊಂಡಿತ್ತು.

ಯುವತಿ ತನ್ನ ತಾಯಿಯ ಸಾವಿನ ಬಗ್ಗೆ ತನ್ನ ಕುಟುಂಬದ ಯಾವುದೇ ಸದಸ್ಯರಿಗೆ ತಿಳಿಸಿರಲಿಲ್ಲ.

ಮನೆಯಿಂದ ವಾಸನೆ ಬರುತ್ತಿರುವುದನ್ನು ಗಮನಿಸಿದ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕಾಗಮಿಸಿದ ಲಕ್ನೊ ಪೊಲೀಸರು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ನಿಂದ ನಿವೃತ್ತಿಯಾಗಿರುವ ಸುನೀತಾ ದೀಕ್ಷಿತ್ ಅವರ ಮೃತದೇಹವನ್ನು ಹೊರತೆಗೆದಿದ್ದಾರೆ.

ಆರಂಭದಲ್ಲಿ  ಪೊಲೀಸರು ನಿವಾಸಕ್ಕೆ ಪ್ರವೇಶಿಸಿದಾಗ  ಮುಖ್ಯ ಬಾಗಿಲಿಗೆ ಬೀಗ ಹಾಕಿರುವುದು ಕಂಡುಬಂದಿತು. ಆದರೆ ಅವರು ಮಹಿಳೆಯ ಧ್ವನಿಯನ್ನು ಕೇಳಿದರು. ಅವರು ಬಾಗಿಲು ಬಡಿದಾಗ, ಮೃತರ 26 ವರ್ಷದ ಮಗಳು ಅಂಕಿತಾ ದೀಕ್ಷಿತ್ ಮನೆ ಬಾಗಿಲು ತೆರೆಯದೆ ಪ್ರತಿಭಟಿಸಲಾರಂಭಿಸಿದರು. ಬೇರೆ ದಾರಿ ಕಾಣದ ಪೊಲೀಸರು ಬಡಗಿಯನ್ನು ಕರೆಸಿ ಬಾಗಿಲು ಒಡೆದು ಮನೆಯೊಳಗೆ ಪ್ರವೇಶಿಸಿದರು.

ಲಕ್ನೊ ಪೊಲೀಸರು ಮನೆಯೊಳಗೆ ಪ್ರವೇಶಿಸಿದಾಗ  ಅಂಕಿತಾ ಒಂದು ಕೋಣೆಯಲ್ಲಿ ಮತ್ತು ಆಕೆಯ ತಾಯಿ ಮತ್ತೊಂದು ಕೋಣೆಯಲ್ಲಿ ಮಲಗಿರುವುದನ್ನು ನೋಡಿದರು. ಅಂಕಿತಾ  ಅವರ ಮಾನಸಿಕ ಸ್ಥಿತಿ ಚೆನ್ನಾಗಿಲ್ಲ ಎಂದು ವರದಿಯಾಗಿದೆ.

ಕೋಣೆಯೊಳಗಿದ್ದ ಯುವತಿಯನ್ನು ನೋಡಿ ಪೊಲೀಸರು ಬೆಚ್ಚಿಬಿದ್ದರು. ಯುವತಿಗೆ ಹೆಚ್ಚು ಮಾತನಾಡಲು ಸಾಧ್ಯವಾಗಲಿಲ್ಲ, ಕೆಲವು ಪ್ರಶ್ನೆಗಳ ನಂತರ ಯುವತಿ  ಮೃತಪಟ್ಟ ಮಹಿಳೆಯ  ಮಗಳು ಎಂದು ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News