ಜ್ಞಾನವಾಪಿ ಮಸೀದಿ ಪ್ರಕರಣ: ಇತಿಹಾಸ ಪ್ರಾಧ್ಯಾಪಕ ರತನ್‌ ಲಾಲ್‌ಗೆ ಜಾಮೀನು

Update: 2022-05-21 12:03 GMT
Photo: Twitter

ಹೊಸದಿಲ್ಲಿ: ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಪತ್ತೆಯಾಗಿದೆ ಎನ್ನಲಾದ 'ಶಿವಲಿಂಗ'ದ ಬಗ್ಗೆ  ಆಕ್ಷೇಪಾರ್ಹ ಪೋಸ್ಟ್‌ ಹಾಕಿದ್ದ ಆರೋಪದಲ್ಲಿ ಬಂಧನಕ್ಕೊಳಗಾದ ದಿಲ್ಲಿ ವಿಶ್ವವಿದ್ಯಾಲಯದ ಹಿಂದೂ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ರತನ್ ಲಾಲ್‌ಗೆ ಜಾಮೀನು ನೀಡಲಾಗಿದೆ.

ಧರ್ಮದ ಆಧಾರದ ಮೇಲೆ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುತ್ತಿದ್ದಾರೆ  ಎಂದು ಆರೋಪಿಸಿ ಉತ್ತರ ದಿಲ್ಲಿಯ ಸೈಬರ್ ಪೊಲೀಸ್ ಠಾಣೆಯ ಅಧಿಕಾರಿಗಳು ಲಾಲ್ ಅವರನ್ನು ಬಂಧಿಸಿದ್ದರು. ಇಂದು ಮಧ್ಯಾಹ್ನ ಲಾಲ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದರು.

ದಿಲ್ಲಿ ಮೂಲದ ವಕೀಲರೊಬ್ಬರು ನೀಡಿದ ಪೊಲೀಸ್ ದೂರಿನ ಮೇರೆಗೆ ಮಂಗಳವಾರ ರಾತ್ರಿ ಲಾಲ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ವಕೀಲ ವಿನೀತ್ ಜಿಂದಾಲ್ ಅವರ ದೂರಿನಲ್ಲಿ,  ಲಾಲ್ ಇತ್ತೀಚೆಗೆ "ಶಿವಲಿಂಗದ ವಿರುದ್ಧ ಅವಹೇಳನಕಾರಿ, ಮತ್ತು ಪ್ರಚೋದನಕಾರಿ ಟ್ವೀಟ್" ಅನ್ನು ಹಂಚಿಕೊಂಡಿದ್ದಾರೆ ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News