ಭ್ರಷ್ಟಾಚಾರ ಪ್ರಕರಣ: ಹರ್ಯಾಣದ ಮಾಜಿ ಸಿಎಂ ಓಂ ಪ್ರಕಾಶ್ ಚೌಟಾಲ ದೋಷಿ

Update: 2022-05-21 16:53 GMT

ಹೊಸದಿಲ್ಲಿ, ಮೇ 21: ಅಕ್ರಮ ಆಸ್ತಿ ಹೊಂದಿದ ಪ್ರಕರಣದಲ್ಲಿ ಹರ್ಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲ ಅವರನ್ನು ದಿಲ್ಲಿಯ ರೋಸ್ ಅವೆನ್ಯೂ ನ್ಯಾಯಾಲಯ ದೋಷಿ ಎಂದು ಪರಿಗಣಿಸಿದೆ.

ಶಿಕ್ಷೆಯ ಪ್ರಮಾಣದ ಬಗೆಗಿನ ವಾದವನ್ನು ನ್ಯಾಯಾಲಯ ಮೇ 26ರಂದು ಆಲಿಸಲಿದೆ. 1993 ಹಾಗೂ 2006ರ ನಡುವೆ 6.09 ಕೋಟಿ ಮೌಲ್ಯದ ಅಕ್ರಮ ಆಸ್ತಿ ಹೊಂದಿರುವ ಬಗ್ಗೆ ಓಂ ಪ್ರಕಾಶ್ ಚೌಟಾಲ ಅವರ ವಿರುದ್ಧ ಸಿಬಿಐ 2010 ಮಾರ್ಚ್ 26ರಂದು ಆರೋಪ ಪಟ್ಟಿ ಸಲ್ಲಿಸಿತ್ತು. ಅಕ್ರಮ ಆಸ್ತಿ ಹೊಂದಿರುವುದಕ್ಕೆ ಸಂಬಂಧಿಸಿ 2021 ಜನವರಿಯಲ್ಲಿ ದಿಲ್ಲಿ ನ್ಯಾಯಾಲಯದ ಚೌಟಾಲ ಅವರ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪ ಪಟ್ಟಿ ರೂಪಿಸಿತ್ತು. 2013ರಲ್ಲಿ ಶಿಕ್ಷಕರ ನೇಮಕಾತಿಯ ಹಗರಣದಲ್ಲಿ ದೋಷಿ ಎಂದು ಪರಿಗಣಿತರಾದ ಚೌಟಾಲ ಹಾಗೂ ಅವರ ಪುತ್ರ ಅಜಯ್ ಅವರಿಗೆ ನ್ಯಾಯಾಲಯ 10 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News