​ಭಟ್ಕಳ: ವಿದ್ಯುತ್ ಶಾರ್ಟ್ ಸೆರ್ಕ್ಯೂಟ್; ಮನೆಗೆ ಹಾನಿ

Update: 2022-05-21 17:49 GMT

ಭಟ್ಕಳ: ವಿದ್ಯುತ್ ಶಾರ್ಟ್ ಸೆರ್ಕ್ಯೂಟ್ ನಿಂದಾಗಿ ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಕೆಲ ಸಮಯ ಆತಂಕದ ವಾತವರಣ ನಿರ್ಮಾಣಗೊಂಡ ಘಟನೆ ಶನಿವಾರ ನಗರದ ರಾ.ಹೆ.66 ರ ಬಳಿ ಇರುವ ರಂಗೀಕಟ್ಟೆಯಲ್ಲಿ ನಡೆದಿದೆ.

ಬಾಷಾ ದಾಮ್ದಾ ಎಂಬವರ ಮನೆಯೇ ಶಾರ್ಟ್ ಸೆರ್ಕ್ಯೂಟ್ ನಿಂದಾಗಿ ಬೆಂಕಿ ಕಾಣಿಸಿದ್ದು ಮನೆಯಲ್ಲಿ ದಟ್ಟ ಹೊಗೆ ತುಂಬಿಕೊಂಡಿತ್ತು. ಇದನ್ನು ಕಂಡ ಮನೆಯಲ್ಲಿದ್ದ ಮಕ್ಕಳು ಮತ್ತು ಮಹಿಳೆಯರು ಆತಂಕಿತರಾಗಿ ಮನೆಯಿಂದ ಹೊರಕ್ಕೆ ಬರಲು ಹರಸಹಾಸ ಪಡಬೇಕಾಯಿತು.

ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸದೆ ಎಲ್ಲರೂ ಸುರಕ್ಷಿತರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದು, ಸ್ಥಳಕ್ಕೆ ಕಂದಾಯ ಅಧಿಕಾರಿಗಳು, ಹೆಸ್ಕಾಂ ಅಧಿಕಾರಿ ಭೇಟಿ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News