ಉತ್ತರ ಕೊರಿಯಾದಲ್ಲಿ ಹೆಚ್ಚುತ್ತಿರುವ ಕೋವಿಡ್:‌ ಅಮೆರಿಕಾದಿಂದ ನೆರವು ನೀಡುವ ಪ್ರಸ್ತಾವಕ್ಕೆ ಪ್ರತಿಕ್ರಿಯೆಯಿಲ್ಲ

Update: 2022-05-21 18:27 GMT
REUTERS

ಸಿಯೋಲ್, ಮೇ 21: ಉತ್ತರಕೊರಿಯಾದಲ್ಲಿ ತೀವ್ರಗತಿಯಲ್ಲಿ ಹೆಚ್ಚುತ್ತಿರುವ ಕೋವಿಡ್ ಸೋಂಕನ್ನು ನಿಯಂತ್ರಿಸಲು ಕೋವಿಡ್ ಲಸಿಕೆ ಪೂರೈಸಲು ಸಿದ್ಧ ಎಂಬ ಅಮೆರಿಕದ ಹೇಳಿಕೆಗೆ ಉತ್ತರ ಕೊರಿಯಾದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

ಉತ್ತರ ಕೊರಿಯಾದಲ್ಲಿ ಕೋವಿಡ್ ಸೋಂಕಿನ ಪ್ರಕರಣ ದಿನೇ ದಿನೇ ಹೆಚ್ಚುತ್ತಿದ್ದು ಶನಿವಾರದ ವರೆಗಿನ ಮಾಹಿತಿಯ ಪ್ರಕಾರ ದೇಶದಲ್ಲಿ ಸುಮಾರು 2.5 ಮಿಲಿಯನ್ ಸೋಂಕಿತರಿದ್ದಾರೆ. ದಕ್ಷಿಣ ಕೊರಿಯಾಕ್ಕೆ ಅಧಿಕೃತ ಭೇಟಿ ನೀಡಿರುವ ಬೈಡನ್, ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ಉತ್ತರ ಕೊರಿಯಾಕ್ಕೆ ನೆರವಾಗಲು ಸಿದ್ಧ. ಉತ್ತರ ಕೊರಿಯಾಕ್ಕೆ ಮಾತ್ರವಲ್ಲ, ಚೀನಾಕ್ಕೂ ಕೋವಿಡ್ ಲಸಿಕೆ ಪೂರೈಸಲು ನಾವು ಸಿದ್ಧ ಎಂದು ಘೋಷಿಸಿದ್ದರು. ಇದಕ್ಕೆ ಉತ್ತರ ಕೊರಿಯಾದಿಂದ ಪ್ರತಿಕ್ರಿಯೆ ಬಂದಿಲ್ಲ ಎಂದು ಬೈಡನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News