ಮಂಗಳೂರು: 5 ತರಗತಿಯಿಂದ ನೇರವಾಗಿ ಎಸೆಸೆಲ್ಸಿ ಪಾಸಾದ ಅಹ್‌ಸಾನ್ ಸಾದಿಕ್

Update: 2022-05-21 18:12 GMT
ಅಹ್‌ಸಾನ್ ಸಾದಿಕ್

ಮಂಗಳೂರು, ಮೇ 21: ನಗರದ ಸ್ಟೇಟ್‌ಬ್ಯಾಂಕ್ ಸಮೀಪದ ನ್ಯಾಷನಲ್ ಟ್ಯುಟೋರಿಯಲ್ ಶಿಕ್ಷಣ ಸಂಸ್ಥೆಯ ಎಸೆಸೆಲ್ಸಿ ವಿದ್ಯಾರ್ಥಿ ಅಹ್‌ಸಾನ್ ಸಾದಿಕ್ ೨೦೨೧-೨೨ನೆ  ಸಾಲಿನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಗಮನ ಸೆಳೆದಿದ್ದಾರೆ.

ಅಂದರೆ ಈ ವಿದ್ಯಾರ್ಥಿಯು ಐದನೇ ತರಗತಿಯಿಂದ ನೇರವಾಗಿ ಹತ್ತನೇ ತರಗತಿಗೆ ಸೇರ್ಪಡೆಗೊಂಡು ಕೇವಲ ಒಂದೇ ವರ್ಷದಲ್ಲಿ ಕಲಿತು ಪಾಸಾಗಿರುವುದು ವಿಶೇಷ ಸಾಧನೆಯಾಗಿದೆ.

ನ್ಯಾಷನಲ್ ಟ್ಯುಟೋರಿಯಲ್ಸ್ ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.95 ಫಲಿತಾಂಶ ದಾಖಲಿಸಿದೆ. ನೇರವಾಗಿ ಎಸೆಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ತರಗತಿಗಳಿಗೆ ಈಗಾಗಲೇ ದಾಖಲಾತಿ ಆರಂಭವಾಗಿದೆ. ೭ನೇ, ೮ನೇ, ೯ನೇ ಫೇಲಾದ ವಿದ್ಯಾರ್ಥಿಗಳು ನೇರವಾಗಿ ಹತ್ತನೇ ತರಗತಿಗೆ ಪ್ರವೇಶ ಪಡೆಯಬಹುದು ಎಂದು ಸಂಸ್ಥೆಯ ಪ್ರಾಂಶುಪಾಲ ಯು.ಎಚ್.ಖಾಲಿದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಅದೇ ರೀತಿ ೭ನೇ ತರಗತಿಯಿಂದ ನೇರ ಎಸೆಸೆಲ್ಸಿಗೆ ಸೇರ್ಪಡೆಗೊಂಡಿದ್ದ ಸಾದ್, ಸಯೀದ್, ಗುಲ್ಶನ್ ಹಾಗೂ ೮ನೆ ತರಗತಿಯಿಂದ ನೇರ ಎಸೆಸೆಲ್ಸಿಗೆ ಸೇರ್ಪಡೆಗೊಂಡಿದ್ದ ಶರ್ವಾನ್ ಎಂಬ ವಿದ್ಯಾರ್ಥಿಗಳು ಕೂಡ  ತೇರ್ಗಡೆಗೊಂಡು ಸಂಸ್ಥೆಗೆ ಕೀರ್ತಿ ತಂದಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News