"13,500ಕೋಟಿ ರೂ. ವಂಚಿಸಿದಾತನನ್ನು 4 ವರ್ಷಗಳಿಂದ ಬಂಧಿಸಿಲ್ಲ, ಟ್ವೀಟಿಸಿದವರನ್ನು ಬಂಧಿಸಿ ಮೆರೆಯುತ್ತಿದ್ದೇವೆ"

Update: 2022-05-22 18:21 GMT

ಹೊಸದಿಲ್ಲಿ: ಸಾಮಾಜಿಕ ತಾಣದಲ್ಲಿ ಆಕ್ಷೇಪಾರ್ಹ ಪೋಸ್ಟ್‌ ಮಾಡಿ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆಂದು ಆರೋಪಿಸಿ ದಿಲ್ಲಿ ಯುನಿವರ್ಸಿಟಿಯ ಪ್ರಾಧ್ಯಾಪಕರನ್ನು ಬಂಧಿಸಿದ ಹಿನ್ನೆಲೆಯಲ್ಲಿ ಹಿರಿಯ ಪತ್ರಕರ್ತ ರಾಜ್‌ದೀಪ್‌ ಸರ್ದೇಸಾಯಿ ಟ್ವೀಟ್‌ ಮೂಲಕ ಸರಕಾರದ ಧೋರಣೆಯನ್ನು ಪ್ರಶ್ನಿಸಿದ್ದಾರೆ. ""13,500ಕೋಟಿ ರೂ. ವಂಚಿಸಿದಾತನನ್ನು 4 ವರ್ಷಗಳಿಂದ ಬಂಧಿಸಿಲ್ಲ, ಟ್ವೀಟಿಸಿದವರನ್ನು ಬಂಧಿಸಿ ಮೆರೆಯುತ್ತಿದ್ದೇವೆ" ಎಂದು ಅವರು ಟ್ವೀಟ್‌ ನಲ್ಲಿ ಹೇಳಿದ್ದಾರೆ.

"ರವಿವಾರ ಮಧ್ಯಾಹ್ನದ ಚಿಂತನೆ: ಕಳೆದ ನಾಲ್ಕು ವರ್ಷಗಳಿಂದ ಮೆಹುಲ್ ಚೋಕ್ಸಿಯನ್ನು ಚಿಕ್ಕ ಆಂಟಿಗುವಾದಿಂದ ಗಡೀಪಾರು ಮಾಡಿಸಲು ಸಾಧ್ಯವಾಗಿಲ್ಲ ಎಂಬುದು ನಂಬಲಾಗದ ಸಂಗತಿ. ಟ್ವೀಟ್‌ಗಳು/ಪೋಸ್ಟ್‌ಗಳಿಗಾಗಿ ಪ್ರೊಫೆಸರ್‌ಗಳು/ನಟರನ್ನು ಬಂಧಿಸುವಲ್ಲಿ ನಾವು ನಮ್ಮ ಶಕ್ತಿ ತೋರಿಸುತ್ತೇವೆ ಆದರೆ ರೂ. 13,500 ಕೋಟಿ ಹಗರಣಗಳಲ್ಲಿನ ಪರೀಕ್ಷೆಯಲ್ಲಿ ಪ್ರಮುಖ ಆರೋಪಿಗಳು ಸಮುದ್ರತೀರದಲ್ಲಿ ಎಂದೆಂದಿಗೂ ಸಂತೋಷದಿಂದ ಬದುಕಬಹುದು! ಒಪ್ಪುತ್ತೀರಾ?" ಎಂದು ಅವರು ತಮ್ಮ ಟ್ವೀಟ್‌ ನಲ್ಲಿ ಬರೆದುಕೊಂಡಿದ್ದಾರೆ.

ಈ ಪೋಸ್ಟ್‌ ಗೆ ಕಾಮೆಂಟ್‌ ಮಾಡಿ ವ್ಯಕ್ತಿಯೋರ್ವರು, "ಎಲ್ಲಾ ದೇಶಗಳಿಗೂ ಅದರದ್ದೇ ಆದ ಸಾರ್ವಭೌಮತೆ ಇದೆ. ನೀವು ಅಡ್ಡದಾರಿಯ ಮೂಲಕ ಆತನನ್ನು ಕರೆದುಕೊಂಡು ಬರಬೇಕು ಅಂತ ಹೇಳುತ್ತಿದ್ದೀರಾ?" ಎಂದು ವ್ಯಂಗಭರಿತವಾಗಿ ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸರ್ದೇಸಾಯಿ, "ವಿಭಾಗ 7 1993 ಆಂಟಿಗುವಾ ಹಸ್ತಾಂತರ ಕಾಯಿದೆಯ ಪ್ರಕಾರ ಗಡಿಪಾರು ಮಾಡಬಹುದಾಗಿದೆ, ಉದ್ದೇಶವಿದ್ದರೆ ದಾರಿಯೂ ಇರುತ್ತದೆ" ಎಂದಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News