10 ಲಕ್ಷ ಆಶಾ ಕಾರ್ಯಾಕರ್ತೆಯರಿಗೆ ವಿಶ್ವ ಆರೋಗ್ಯ ಸಂಸ್ಥೆಯ ಗೌರವ

Update: 2022-05-22 18:31 GMT

ಸಿದ್ಧಾರ್ಥನಗರ (ಉತ್ತರಪ್ರದೇಶ), ಮೇ 22: ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆಯ ಸೌಲಭ್ಯಗಳು ನೇರವಾಗಿ ಲಭ್ಯವಾಗುವಂತೆ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಹಾಗೂ ಭಾರತದಲ್ಲಿ ಕೊರೋನ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವಲ್ಲಿ ಅವಿರತ ಪ್ರಯತ್ನಿಸಿದ ಭಾರತದ 10 ಲಕ್ಷ ಆಶಾ ಕಾರ್ಯಕರ್ತೆಯರನ್ನು ವಿಶ್ವ ಆರೋಗ್ಯ ಸಂಸ್ಥೆ ರವಿವಾರ ಗೌರವಿಸಿದೆ. ಭಾರತದಲ್ಲಿ ಕೊರೋನ ಸಾಂಕ್ರಾಮಿಕ ರೋಗ ಉತ್ತುಂಗದ ಸ್ಥಿತಿಯಲ್ಲಿ ಇರುವ ಸಂದರ್ಭ ಕೊರೋನ ಸೋಂಕಿತ ರೋಗಿಗಳನ್ನು ಪತ್ತೆ ಹಚ್ಚಲು ಮನೆ ಮನೆಗೆ ತೆರಳುವ ಮೂಲಕ ಇವರಲ್ಲಿ ಹೆಚ್ಚಿನವರು ಗಮನ ಸೆಳೆದಿದ್ದರು. ಸುಧಾರಿತ ಜಾಗತಿಕ ಆರೋಗ್ಯ, ನಾಯಕತ್ವ ಪ್ರದರ್ಶನ ಹಾಗೂ ಪ್ರಾದೇಶಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಬದ್ಧತೆಗೆ ಅತ್ಯುತ್ತಮ ಕೊಡುಗೆ ನೀಡಿದವರನ್ನು ಗುರುತಿಸಲು ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕ ಡಾ. ಟೆಡ್ರೂಸ್ ಅಧಾನೋಮ್ ೆಬ್ರಿಯೀಸಸ್ ಅವರು 6 ಪ್ರಶಸ್ತಿಗಳನ್ನು ರವಿವಾರ ಘೋಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News