ಕೋವಿಡ್, ಹೆಚ್ಚುತ್ತಿರುವ ಅಸಮಾನತೆ, ಹಣದುಬ್ಬರದಿಂದ 2022ರಲ್ಲಿ 26 ಕೋಟಿ ಮಂದಿ ತೀವ್ರ ಬಡತನಕ್ಕೆ; ವರದಿ

Update: 2022-05-23 05:26 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಕೋವಿಡ್-19 ಸಂಕಷ್ಟ, ಹೆಚ್ಚುತ್ತಿರುವ ಅಸಮಾನತೆ ಮತ್ತು ಆಹಾರ ಬೆಲೆ ಏರಿಕೆಯಿಂದಾಗಿ 2022ರಲ್ಲಿ 263 ದಶಲಕ್ಷ ಮಂದಿ ತೀವ್ರ ಬಡತನದ ದವಡೆಗೆ ಸಿಲುಕಲಿದ್ದಾರೆ ಎಂದು ಆಕ್ಸ್ ಫಾನ್ ಇಂಟರ್‍ನ್ಯಾಷನಲ್ ವರದಿ ಅಂದಾಜಿಸಿದೆ. ಇದು ದಶಕಗಳಿಂದ ಆಗಿರುವ ಪ್ರಗತಿಯ ಚಿತ್ರಣ ಇದರಿಂದ ವ್ಯತಿರಿಕ್ತವಾಗಲಿದೆ. ಅಂದರೆ ಪ್ರತಿ 33 ಗಂಟೆಗೆ 10 ಲಕ್ಷ ಮಂದಿ ಬಡತನದ ದವಡೆಗೆ ತಳ್ಳಲ್ಪಡುತ್ತಿದ್ದಾರೆ.

ಇನ್ನೊಂದು ಆತಂಕಕಾಗಿ ಅಂಶವೆಂದರೆ ಲಿಂಗ ವೇತನ ತಾರತಮ್ಯ ಸಾಂಕ್ರಾಮಿಕ ಪೂರ್ವ ಅವಧಿಗೆ ಹೋಲಿಸಿದರೆ ಮತ್ತಷ್ಟು ಹೆಚ್ಚಿದ್ದು, ಇದು ಬಗೆಹರಿಯಲು ಕನಿಷ್ಠ 100 ವರ್ಷಗಳು ತಗುಲಬಹುದು ಎಂದು ಈ ಹಿಂದೆ ಅಂದಾಜಿಸಲಾಗಿತ್ತು. ಆದರೆ ಹೊಸ ಅಂತರದ ಬಳಿಕ ಇದು ಬಗೆಹರಿಯಲು 136 ವರ್ಷಗಳು ಬೇಕಾಗಬಹುದು ಎಂದು ವರದಿ ಅಂದಾಜಿಸಿದೆ.

ಈ ವಿಶ್ಲೇಷಣೆಯ ಪ್ರಕಾರ, ಸಾಂಕ್ರಾಮಿಕದ ಅವಧಿಯಲ್ಲಿ ಹೆಚ್ಚು ಮಹಿಳೆಯರು ಉದ್ಯೋಗದಿಂದ ಹೊರಹಾಕಲ್ಪಟ್ಟಿದ್ದು, ಲಾಕ್‍ಡೌನ್ ಮತ್ತು ಸಾಮಾಜಿಕ ಅಂತರ ಕಾಪಾಡುವಿಕೆ, ಪ್ರವಾಸೋದ್ಯಮ, ಆತಿಥ್ಯ ಮತ್ತು ಆರೈಕೆಯಂಥ ಸೇವಾ ವಲಯದ ಮಹಿಳೆಯರ ಉದ್ಯೋಗನಷ್ಟಕ್ಕೆ ಕಾಣವಾಗಿದೆ. ಹೆಚ್ಚುತ್ತಿರುವ ವೇತನರಹಿತ ಕೆಲಸವು ಲಕ್ಷಾಂತರ ಮಂದಿ ಮಹಿಳೆಯರು ಉದ್ಯೋಗಕ್ಕೆ ಮರಳದಂತೆ ತಡೆದಿದೆ ಎಂದು ವಿವರಿಸಿದೆ.

ಸಾಂಕ್ರಾಮಿಕ ಆರಂಭಕ್ಕೆ ಮುನ್ನ ವಿಶ್ವಾದ್ಯಂತ 573 ಮಂದಿ ಶತಕೋಟ್ಯಧಿಪತಿಗಳಿದ್ದರೆ, ಇದೀಗ ಶತಕೋಟ್ಯಾಧೀಶರ ಸಂಖ್ಯೆ 2668ನ್ನು ತಲುಪಿದೆ ಎಂಬ ಫೋಬ್ರ್ಸ್ ವರದಿತ ಅಂಕಿ ಅಂಶಗಳನ್ನು ಆಕ್ಸ್‍ಫಾಮ್ ವಿಶ್ಲೇಷಿಸಿದೆ. ಇದೇ ವೇಳೆ ಶೇಕಡ 99ರಷ್ಟು ಮಂದಿಯ ಆದಾಯ ಕೋವಿಡ್-19 ಪೂರ್ವ ಅವಧಿಗಿಂತ ಕುಸಿದಿದೆ. ಅಂದರೆ 2021ರಲ್ಲಿ 125 ದಶಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News