ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಕಾರಾಗೃಹದಿಂದ ಆಸ್ಪತ್ರೆಗೆ

Update: 2022-05-23 07:42 GMT
Photo:ANI

ಚಂಡಿಗಡ: ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರನ್ನು ವೈದ್ಯಕೀಯ ತಪಾಸಣೆಗಾಗಿ ಸೋಮವಾರ ಪಟಿಯಾಲಾ ಕೇಂದ್ರ ಕಾರಾಗೃಹದಿಂದ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಸಿಧು ಅವರನ್ನು ಪಟಿಯಾಲದ ರಾಜಿಂದ್ರ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ ಎಂದು ANI ಸುದ್ದಿಸಂಸ್ಥೆ ಟ್ವೀಟಿಸಿದೆ.

34 ವರ್ಷಗಳ ಹಿಂದೆ 1988ರಲ್ಲಿ ರಸ್ತೆಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಧುಗೆ ಮೇ 20ರಂದು ಸುಪ್ರೀಂಕೋರ್ಟ್ 1 ವರ್ಷ ಕಠಿಣ ಜೈಲು ಸಜೆ ವಿಧಿಸಿತ್ತು.  ಸಿಧು ಅವರನ್ನು ಪಟಿಯಾಲಾ ಕೇಂದ್ರ ಕಾರಾಗೃಹದ ಕೊಠಡಿ ಸಂಖ್ಯೆ 10ರಲ್ಲಿ ಇರಿಸಲಾಗಿತ್ತು.ಅವರ ಜೊತೆಗೆ ಇನ್ನೂ 4 ಕೈದಿಗಳು ಇದ್ದಾರೆ ಎಂದು ಕಾರಾಗೃಹ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News