‘ಟೈಮ್’ ಮ್ಯಾಗಝಿನ್ ನ ಪ್ರಭಾವಿಗಳ ಪಟ್ಟಿಯಲ್ಲಿ ಪುಟಿನ್, ಝೆಲೆನ್ಸ್ಕಿ!

Update: 2022-05-23 17:52 GMT

ವಾಶಿಂಗ್ಟನ್, ಮೇ 23: ‘ಟೈಮ್’ ಮ್ಯಾಗಝಿನ್‌ನ  2022ರ ಅತ್ಯಂತ ಪ್ರಭಾವಿ ಜಾಗತಿಕ ವ್ಯಕ್ತಿಗಳಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ  ಮತ್ತು ರಶ್ಯ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೇರಿದ್ದಾರೆ. 100 ಅತ್ಯಂತ ಪ್ರಭಾವಿ ವ್ಯಕ್ತಿಗಳ ನಾಯಕರ ವಿಭಾಗದಲ್ಲಿ ಈ ಇಬ್ಬರನ್ನೂ ಸೇರಿಸಿಕೊಳ್ಳುವ ಮೂಲಕ ಮ್ಯಾಗಝಿನ್ ಅಚ್ಚರಿ ಹುಟ್ಟಿಸಿದೆ.

‘‘ಜಾಗತಿಕ ಮಟ್ಟದಲ್ಲಿ 100 ಮಂದಿ ಪ್ರಭಾವಿಗಳನ್ನು ಆಯ್ಕೆ ಮಾಡಲು ‘ಟೈಮ್’ ನಿರ್ಧರಿಸಿದಾಗ ನಮ್ಮಲ್ಲಿರುವ ಮಾನದಂಡ ಒಂದೇ: ಪ್ರಭಾವ. ವರ್ಷವನ್ನು ಯಾರು ರೂಪಿಸಿದರು? ಯಾರು ಪ್ರತಿರೋಧ ತೋರಿಸಿದರು? ಯಾರು ಎಲ್ಲರಿಗಿಂತ ಶ್ರೇಷ್ಠರಾದರು? ಒಳ್ಳೆಯ ಕೆಲಸಕ್ಕಾಗಿ ಅಥವಾ ಕೆಟ್ಟ ಕೆಲಸಕ್ಕಾಗಿಯೂ ಬಳಸಿದ ಪ್ರಭಾವವು ಟೈಮ್100ರ ಈ ವರ್ಷದ ಆವೃತ್ತಿಗಿಂತ ಹೆಚ್ಚು ಎಲ್ಲೂ ಕಾಣ ಸಿಗದು. ಇಲ್ಲಿ ವ್ಲಾಡಿಮಿರ್ ಪುಟಿನ್ ಕೂಡ ಇದ್ದಾರೆ ಮತ್ತು ವೊಲೊಡಿಮಿರ್ ಝೆಲೆನ್‌ಸ್ಕಿ ಕೂಡ ಇದ್ದಾರೆ. ಅವರು ಈ ಪಟ್ಟಿಯ ವಿರುದ್ಧ ಧ್ರುವಗಳು. ಓರ್ವ ಅಮಾನುಷ ಯುದ್ಧದ ಹಿಂದಿನ ಸರ್ವಾಧಿಕಾರಿ ಮತ್ತು ಇನ್ನೊಬ್ಬ ಆಕ್ರಮಣವನ್ನು ಎದುರಿಸಿ ನಿಂತು ಹೀರೋ ಆದವರು’’ ಎಂಬುದಾಗಿ ಟೈಮ್ನ್ ಪ್ರಧಾನ ಸಂಪಾದಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News