ಮತ್ತೊಂದು ಪ್ರಕರಣದ ತನಿಖೆಗೆ ಕಾಶ್ಮೀರದ ಪತ್ರಕರ್ತ ಫಹದ್‌ ಶಾರನ್ನು ಕಸ್ಟಡಿಗೆ ಪಡೆದ ರಾಜ್ಯ ತನಿಖಾ ಏಜನ್ಸಿ

Update: 2022-05-24 07:16 GMT
Photo: Fahadsha.com

ಜಮ್ಮು: ಕಾಶ್ಮೀರ್ ಸಾರ್ವಜನಿಕ ಸುರಕ್ಷತಾ ಕಾಯಿದೆಯಡಿ ಬಂಧಿತರಾಗಿರುವ ಪತ್ರಕರ್ತ ಫಾಹದ್ ಶಾ ಅವರ ಕಸ್ಟಡಿಯನ್ನು ರಾಜ್ಯ ತನಿಖಾ ಏಜನ್ಸಿಗೆ ವಹಿಸಲಾಗಿದೆ.

 ಶಾ ಅವರ ಸಂಪಾದಕತ್ವದ ದಿ ಕಾಶ್ಮೀರ್ ವಾಲಾ ಆನ್‍ಲೈನ್ ನಿಯತಕಾಲಿಕದಲ್ಲಿ 2011ರಲ್ಲಿ ಪ್ರಕಟಗೊಂಡ ʼಪ್ರಚೋದನಾತ್ಮಕ ಮತ್ತು ದೇಶದ್ರೋಹದ ಅಂಶಗಳನ್ನು ಒಳಗೊಂಡʼ ಲೇಖನವೊಂದಕ್ಕೆ ಸಂಬಂಧಿಸಿದಂತೆ  ತನಿಖೆಗಾಗಿ ಶಾ ಅವರ ಕಸ್ಟಡಿಯನ್ನು ಏಜನ್ಸಿ ಪಡೆದುಕೊಂಡಿದೆ. ಅವರನ್ನು ಇಲ್ಲಿಯ ತನಕ ಕುಪ್ವಾ ಜೈಲಿನಲ್ಲಿ ಇರಿಸಲಾಗಿತ್ತು. ಇದು ಶಾ ವಿರುದ್ಧ ದಾಖಲಿಸಲಾಗಿರುವ ಐದನೇ ಪ್ರಕರಣವಾಗಿದೆ.

ಈ ನಿರ್ದಿಷ್ಟ ಲೇಖನವನ್ನು ಎಪ್ರಿಲ್ 17ರಂದು ಬಂಧಿತರಾಗಿರುವ ಪಿಎಚ್ಡಿ ಸಂಶೋಧಕ ಅಬ್ದುಲ್ ಆಲ ಫಝಿಲಿ ಅವರು ಬರೆದಿದ್ದರು. "ದಿ ಶ್ಯಾಕಲ್ಸ್ ಆಫ್ ಸ್ಲೇವರಿ ವಿಲ್ ಬ್ರೇಕ್ ಎಂಬ ಹೆಸರಿನ ಈ ಲೇಖನವು ಉಗ್ರವಾದವನ್ನು ವೈಭವೀಕರಿಸುವ ಮೂಲಕ ಜಮ್ಮು ಕಾಶ್ಮೀರದಲ್ಲಿ ಅಶಾಂತಿ ಸೃಷ್ಟಿಸಲು ಮತ್ತು ಯುವಜನತೆಗೆ ಹಿಂಸೆಯ ಹಾದಿ ಹಿಡಿಯಲು ಪ್ರೇರೇಪಿಸಿದೆ" ಎಂದು ಪೊಲೀಸರು ನೀಡಿದ ಹೇಳಿಕೆಯಲ್ಲಿ ತಿಳಿಸಲಾಗಿತ್ತು.

ವಿಚಾರಣೆ ವೇಳೆಗೆ ಫಝಿಲಿ ಅವರು ತಾವು ಈ ಲೇಖನವನ್ನು ಬರೆದಿರುವುದನ್ನು ನಿರಾಕರಿಸಿರುವುದರಿಂದ ವಾಸ್ತವಾಂಶ ತಿಳಿಯಲು  ಮ್ಯಾಗಝಿನ್ ಮುಖ್ಯ ಸಂಪಾದಕರನ್ನು ತನಿಖಾ ಏಜನ್ಸಿಯು ತನ್ನ ಕಸ್ಟಡಿಗೆ ಪಡೆಯುವುದು ಅನಿವಾರ್ಯ ಎಂದು ಮೇ 1 ರಂದು ಜಮ್ಮುವಿನ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News