ವಾರಣಾಸಿಯ ಜ್ಞಾನವಾಪಿ ಮಸೀದಿ ಪ್ರಕರಣ: ಗುರುವಾರ ಮಸೀದಿ ಆಡಳಿತ ಸಮಿತಿಯ ವಾದ ಆಲಿಸಲಿರುವ ನ್ಯಾಯಾಲಯ
Update: 2022-05-24 15:10 IST
ವಾರಣಾಸಿ: ಸುಪ್ರೀಂ ಕೋರ್ಟ್‌ನ ಆದೇಶದ ಮೇರೆಗೆ ಜ್ಞಾನವಾಪಿ ಮಸೀದಿ ಪ್ರಕರಣದ ವಿಚಾರಣೆ ನಡೆಸುತ್ತಿರುವ ವಾರಣಾಸಿಯ ಹಿರಿಯ ನ್ಯಾಯಾಧೀಶರ ನ್ಯಾಯಾಲಯ, ಕಳೆದ ವಾರ ಮಸೀದಿಯೊಳಗೆ ಚಿತ್ರೀಕರಣ ನಡೆಸಿರುವುದು ಕಾನೂನುಬಾಹಿರ ಎಂಬ ಮಸೀದಿ ಆಡಳಿತ ಸಮಿತಿಯ ವಾದವನ್ನು ಮೊದಲು ಆಲಿಸುವುದಾಗಿ ಹೇಳಿದೆ. ಗುರುವಾರ ವಿಚಾರಣೆ ಆರಂಭವಾಗಲಿದೆ.
ಒಂದು ವಾರದೊಳಗೆ ಸಮೀಕ್ಷಾ ವರದಿಗೆ ತಮ್ಮ ಆಕ್ಷೇಪಣೆಗಳೊಂದಿಗೆ ಅಫಿಡವಿಟ್‌ಗಳನ್ನು ಸಲ್ಲಿಸುವಂತೆಯೂ ಎರಡು ಕಡೆಯವರಿಗೆ ನ್ಯಾಯಾಧೀಶರು ಆದೇಶಿಸಿದ್ದಾರೆ.
ಮಸೀದಿಯಲ್ಲಿ ಚಿತ್ರೀಕರಣವು 1991 ರ ಕಾನೂನನ್ನು ಉಲ್ಲಂಘಿಸುತ್ತದೆ ಎಂದು ಮಸೀದಿ ಆಡಳಿತ ಸಮಿತಿಯು ಹೇಳಿದೆ, ಈ ಕಾನೂನು ದೇಶದ ಯಾವುದೇ ಪೂಜಾ ಸ್ಥಳದ ಸ್ವರೂಪವನ್ನು ಬದಲಾಯಿಸುವುದನ್ನು ತಡೆಯುತ್ತದೆ.
"ನಿರ್ವಹಣೆ" ಪ್ರಕರಣವನ್ನು ಮೊದಲು ವಿಚಾರಣೆಗೆ ಒಳಪಡಿಸಬೇಕೆಂದು ಸಮಿತಿ ಬಯಸಿತ್ತು. ಅದನ್ನು ನ್ಯಾಯಾಲಯವು ಒಪ್ಪಿಕೊಂಡಿದೆ.