ಟೈಮ್ಸ್ ಪ್ರಭಾವಿಗಳ ಪಟ್ಟಿಯಲ್ಲಿ ಅದಾನಿ, ಕರುಣಾ ನಂದಿ, ಖುರ್ರಂ ಪರ್ವೇಝ್ ಗೆ ಸ್ಥಾನ

Update: 2022-05-24 13:22 GMT
ಖುರ್ರಂ ಪರ್ವೇಝ್ (Photo: Twitter)

ಹೊಸದಿಲ್ಲಿ: ಪ್ರತಿಷ್ಠಿತ ಟೈಮ್ ಮ್ಯಾಗಝೀನ್‍ನ 2022ರ 100 ಮಂದಿ ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಭಾರತೀಯ ಉದ್ಯಮಿ ಗೌತಮ್ ಅದಾನಿ, ವಕೀಲೆ ಕರುಣಾ ನಂದಿ ಹಾಗೂ ಮಾನವ ಹಕ್ಕು ಕಾರ್ಯಕರ್ತ ಖುರ್ರಂ ಪರ್ವೇಝ್ ಅವರು ಸ್ಥಾನ ಪಡೆದಿದ್ದಾರೆ. ವಕೀಲೆ ಕರುಣಾ ನಂದಿ ಅವರು  ವೈವಾಹಿಕ ಅತ್ಯಾಚಾರದ ಅಪರಾಧೀಕರಣಕ್ಕಾಗಿ ಹೋರಾಡುತ್ತಿದ್ದರೆ, ಪರ್ವೇಝ್ ಅವರು ಕಾಶ್ಮೀರದಲ್ಲಿ ಉಗ್ರ ಕೃತ್ಯಗಳಿಗೆ ಹಣ ಪೂರೈಕೆ ಪ್ರಕರಣದ ತನಿಖೆಯ ಭಾಗವಾಗಿ ಈಗ ಜೈಲಿನಲ್ಲಿದ್ದಾರೆ.

ಒಟಿಟಿ ಪ್ಲಾಟ್‍ಫಾರ್ಮ್ ನೆಟ್‍ಫ್ಲಿಕ್ಸ್ ನ ಗ್ಲೋಬಲ್ ಟಿವಿ ಮುಖ್ಯಸ್ಥ, ಭಾರತೀಯ ಅಮೆರಿಕನ್ ಬೇಲಾ ಬಜಾರಿಯಾ ಅವರು ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಉದ್ಯಮಿ ಗೌತಮ್ ಅದಾನಿ  ಅವರು ಜಗತ್ತಿನ ಶ್ರೀಮಂತರ ಪೈಕಿ 11ನೇ ಸ್ಥಾನದಲ್ಲಿದ್ದಾರೆ. ಟೈಮ್ಸ್ ಪಟ್ಟಿಯಲ್ಲಿ ಅವರು `ಟೈಟನ್ಸ್  ವಿಭಾಗದಲ್ಲಿ ಕಾಣಿಸಿಕೊಂಡಿದ್ದರೆ, ನಂದಿ ಮತ್ತು ಪರ್ವೆಝ್ ಅವರು ಲೀಡರ್ಸ್  ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News