ಐಪಿಎಲ್ ಬೆಟ್ಟಿಂಗ್; ಒಂದು ಕೋಟಿ ರೂ. ಕಳೆದುಕೊಂಡ ಪೋಸ್ಟ್ ಮಾಸ್ಟರ್!

Update: 2022-05-25 02:40 GMT
ಸಾಂದರ್ಭಿಕ ಚಿತ್ರ

ಭೋಪಾಲ್: ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಪಂದ್ಯಗಳ ಬೆಟ್ಟಿಂಗ್‍ನಲ್ಲಿ ಮಧ್ಯಪ್ರದೇಶದ ಪೋ‌ಸ್ಟ್ ಮಾಸ್ಟರ್ ಒಬ್ಬರು ಒಂದು ಕೋಟಿ ರೂಪಾಯಿಗಳನ್ನು ಕಳೆದುಕೊಂಡ ಪ್ರಕರಣ ಬೆಳಕಿಗೆ ಬಂದಿದೆ. ‌

ಸಾಗರ ಜಿಲ್ಲೆಯ ಅಂಚೆಕಚೇರಿಯೊಂದರಲ್ಲಿ 24 ಕುಟುಂಬಗಳು ನಿಶ್ಚಿತ ಠೇವಣಿಯಾಗಿ ಇಟ್ಟಿದ್ದ ಮೊತ್ತವನ್ನು ಈತ ಬೆಟ್ಟಿಂಗ್‍ಗೆ ಬಳಸಿಕೊಂಡು ಕಳೆದುಕೊಂಡಿದ್ದಾಗಿ ಪೊಲೀಸರು ಹೇಳಿದ್ದಾರೆ.

ಬಿನಾ ಉಪ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ವಿಶಾಲ್ ಅ‌ಹಿರ್ವಾರ್‌ ಎಂಬಾತನನ್ನು ಬಿನಾ ಸರ್ಕಾರಿ ರೈಲ್ವೆ ಪೊಲೀಸರು ಬಂಧಿಸಿದ್ದು, ಆರೋಪಿ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ.

ಆರೋಪಿ ಪೋಸ್ಟ್ ಮಾಸ್ಟರ್, ಕಳೆದ ಎರಡು ವರ್ಷಗಳಿಂದ ನಕಲಿ ಎಫ್‍ಡಿ ಖಾತೆಗಳಿಗೆ ಪಾಸ್‍‌ ಪುಸ್ತಕ ನೀಡಿ, ಇಡೀ ಮೊತ್ತವನ್ನು ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್‍ಗೆ ಬಳಸಿಕೊಳ್ಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

"ಪೋಸ್ಟ್ ಮಾಸ್ಟರ್ ವಿಶಾಲ್‌ ಅ‌ಹಿರ್ವಾರ್‌ ನನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420 (ವಂಚನೆ) ಮತ್ತು 408 (ವಿಶ್ವಾಸಘಾತುಕ) ಪ್ರಕರಣಗಳ ಅನ್ವಯ ಬಂಧಿಸಲಾಗಿದೆ. ಮುಂದಿನ ತನಿಖೆ ನಡೆಸಿ ಇನ್ನಷ್ಟು ಸೆಕ್ಷನ್‍ಗಳನ್ನು ಸೇರಿಸಲಾಗುವುದು ಎಂದು ಬಿನಾ-ಜಿಆರ್‍ಪಿ ಠಾಣೆಯ ಅಧಿಕಾರಿ ಅಜಯ್ ದೂರ್ವೆ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News