×
Ad

"ಸ್ವತಂತ್ರ ಧ್ವನಿಯಾಗಬೇಕು": ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ ಹಿರಿಯ ಮುಖಂಡ ಕಪಿಲ್‌ ಸಿಬಲ್

Update: 2022-05-25 12:51 IST

ಹೊಸದಿಲ್ಲಿ: ಹಿರಿಯ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಮತ್ತು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ನಡುವೆ ರಾಜಕೀಯಕ್ಕೆ ಸಂಬಂಧಿಸಿ ಮಾತುಕತೆ ನಡೆದ ಬಳಿಕ ಅವರು ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಮೇ 16ರಂದು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾಗಿ ಅವರು ಹೇಳಿದ್ದಾರೆ.  ಅವರು ಯಾದವ್‌ ಸಮ್ಮುಖದಲ್ಲಿ ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿದ ವೀಡಿಯೋವನ್ನು ANI ಪ್ರಕಟಿಸಿದೆ. ಹಿರಿಯ ನಾಯಕ ಪಿಲ್‌ ಸಿಬಲ್‌ ರಾಜೀನಾಮೆ ಕಾಂಗ್ರೆಸ್‌ ನಲ್ಲಿ ತಲ್ಲಣ ಮೂಡಿಸಿದೆ. 

ಮುಂಬರುವ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಂಗಳವಾರದಿಂದ ಆರಂಭವಾಗಿದೆ. ಆಡಳಿತಾರೂಢ ಬಿಜೆಪಿ ಮತ್ತು ಪ್ರಮುಖ ಪ್ರತಿಪಕ್ಷ ಎಸ್‌ಪಿ ಸೇರಿದಂತೆ ಪ್ರಮುಖ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿವೆ.

Thenewindianexpress ವರದಿಯ ಪ್ರಕಾರ ಸಮಾಜವಾದಿ ಪಕ್ಷವು ಮೂರು ಸ್ಥಾನಗಳನ್ನು ಗೆಲ್ಲುವ ವಿಶ್ವಾಸದಲ್ಲಿದೆ. ಇವುಗಳಲ್ಲಿ ತಲಾ ಒಂದನ್ನು ಆರ್‌ಎಲ್‌ಡಿ ಮುಖ್ಯಸ್ಥ ಜಯಂತ್ ಚೌಧರಿ ಮತ್ತು ಸಿಬಲ್‌ಗೆ ನೀಡಬಹುದು ಎಂದು ಉಲ್ಲೇಖಿಸಲಾಗಿದೆ.

11 ಸ್ಥಾನಗಳ ಪೈಕಿ ಬಿಜೆಪಿ 5, ಎಸ್‌ಪಿ ಮೂರು, ಬಿಎಸ್‌ಪಿ ಎರಡು ಮತ್ತು ಕಾಂಗ್ರೆಸ್‌ನ ಒಂದು ಸ್ಥಾನವಿದೆ.

ಅಖಿಲೇಶ್ ಯಾದವ್ ಮತ್ತು ಅಝಂ ಖಾನ್ ಸೇರಿದಂತೆ ಅನೇಕ ಎಸ್‌ಪಿ ನಾಯಕರೊಂದಿಗೆ ಸಿಬಲ್ ಆತ್ಮೀಯ ಸಂಬಂಧವನ್ನು ಹೊಂದಿದ್ದಾರೆಂದು ನಂಬಲಾಗಿದೆ. ಅವರು ಇತ್ತೀಚೆಗೆ ಸುಪ್ರೀಂ ಕೋರ್ಟ್‌ನಲ್ಲಿ ಜೈಲು ಪಾಲಾಗಿದ್ದ ಅಝಂ ಖಾನ್‌ ರನ್ನು ಪ್ರತಿನಿಧಿಸಿದ್ದರು ಮತ್ತು ಅವರಿಗೆ ಮಧ್ಯಂತರ ಜಾಮೀನು ಪಡೆಯಲು ಸಹಾಯ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News