ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್‌ಗೆ ಮರಣದಂಡನೆ ವಿಧಿಸುವಂತೆ ಎನ್ ಐಎ ಮನವಿ
Update: 2022-05-25 15:07 IST
ಹೊಸದಿಲ್ಲಿ: ಭಯೋತ್ಪಾದನೆ ಚಟುವಟಿಕೆಗೆ ನಿಧಿ ಸಂಗ್ರಹ ಪ್ರಕರಣದಲ್ಲಿ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯಡಿ ಸೇರಿದಂತೆ ಎಲ್ಲಾ ಆರೋಪಗಳಲ್ಲಿ ತಪ್ಪೊಪ್ಪಿಕೊಂಡ ಆರೋಪಿ, ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್‌ಗೆ ಬುಧವಾರ ಮರಣದಂಡನೆ ವಿಧಿಸುವಂತೆ ಎನ್ ಐಎ ಕೋರಿದೆ ಎಂದು ನ್ಯಾಯಾಲಯದ ಮೂಲಗಳು ತಿಳಿಸಿವೆ.
ವಿಶೇಷ ನ್ಯಾಯಾಧೀಶ ಪ್ರವೀಣ್ ಸಿಂಗ್ ಅವರ ಮುಂದೆ ಎನ್ ಐಎ ಸಂಸ್ಥೆಯು ಮನವಿ ಸಲ್ಲಿಸಿತು, ಆದರೆ ಮಲಿಕ್‌ಗೆ ಸಹಾಯ ಮಾಡಲು ನ್ಯಾಯಾಲಯವು ನೇಮಿಸಿದ ಅಮಿಕಸ್ ಕ್ಯೂರಿ ಈ ಪ್ರಕರಣದಲ್ಲಿ ಕನಿಷ್ಠ ಶಿಕ್ಷೆ ಜೀವಾವಧಿ ಶಿಕ್ಷೆಯನ್ನು ಕೋರಿದರು,
ಈ ಮಧ್ಯೆ, ಶಿಕ್ಷೆಯ ಪ್ರಮಾಣವನ್ನು ನಿರ್ಧರಿಸಲು ನ್ಯಾಯಾಲಯಕ್ಕೆ ಬಿಡುತ್ತಿದ್ದೇನೆ ಎಂದು ಮಲಿಕ್ ನ್ಯಾಯಾಧೀಶರಿಗೆ ತಿಳಿಸಿದರು.