ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥರಾಗಿ ಘೆಬ್ರಯೇಸಸ್ ಪುನರಾಯ್ಕೆ

Update: 2022-05-25 17:18 GMT

  ಜಿನೆವಾ, ಮೇ 25: ಟೆಡ್ರೋಸ್ ಅಧನೊಮ್ ಘೆಬ್ರಯೇಸಸ್ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರಾಗಿ ಅವಿರೋಧವಾಗಿ ಮರು ಆಯ್ಕೆಯಾಗಿರುವುದಾಗಿ ಘೋಷಿಸಲಾಗಿದೆ.

ಗುಪ್ತ ಮತದಾನ ಪ್ರಕ್ರಿಯೆಯಲ್ಲಿ ಚಲಾವಣೆಯಾದ 160 ಮತಗಳಲ್ಲಿ ಘೆಬ್ರಯೇಸಸ್ಗೆ 155 ಮತ ಲಭಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಇಥಿಯೋಪಿಯಾ ಮೂಲದ ಘೆಬ್ರಯೇಸಸ್ ವಿಶ್ವ ಆರೋಗ್ಯ ಸಂಸ್ಥೆಯ ಉನ್ನತ ಹುದ್ದೆಗೆ ಆಯ್ಕೆಯಾದ ಪ್ರಥಮ ಆಫ್ರಿಕನ್ ಪ್ರಜೆಯಾಗಿದ್ದಾರೆ. ಈ ಅಭೂತಪೂರ್ವ ಗೆಲುವು ತನಗೆ ದೊರೆತ ಮನ್ನಣೆ ಮಾತ್ರವಲ್ಲ, ವಿಶ್ವ ಆರೋಗ್ಯ ಸಂಸ್ಥೆಗೆ, ಸಂಸ್ಥೆ ನಿರ್ವಹಿಸಿದ ಸಾಧನೆಗೆ ದಕ್ಕಿದ ಮನ್ನಣೆಯಾಗಿದೆ ಎಂದವರು ಹರ್ಷ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News