ಬಹುತ್ವದ ಭಾರತವನ್ನು ಧಾರ್ಮಿಕ ಉನ್ಮಾದದ ಮೂಲಕ ವಿಭಜಿಸುವ ಷಡ್ಯಂತ್ರ ನಡೆಯುತ್ತಿದೆ: ಡಾ. ಇಲ್ಯಾಸ್

Update: 2022-05-25 17:54 GMT

ಭಟ್ಕಳ: ಬಹುತ್ವದ ಭಾರತದಲ್ಲಿ ಹಿಂದೂ-ಮುಸ್ಲಿಮ್ ಧಾರ್ಮಿಕ ಉನ್ಮಾದ ಹುಟ್ಟುಹಾಕಲಾಗುತ್ತಿದ್ದು ಇದರ ಮೂಲಕ ದೇಶವನ್ನು ಇಬ್ಭಾಗಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ ಡಾ. ಖಾಸಿಮ್ ರಸೂಲ್ ಇಲ್ಯಾಸ್ ಹೇಳಿದರು.

ಅವರು ಬುಧವಾರ ಭಟ್ಕಳದ ಆಮೀನಾ ಪ್ಯಾಲೇಸ್ ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು.

ಪಕ್ಷ ಸಂಘಟನೆಗಾಗಿ ಕರ್ನಾಟಕದ ಪ್ರವಾಸದಲ್ಲಿರುವ ಇವರು ಭಟ್ಕಳದಲ್ಲಿ ನಡೆಯಲಿರುವ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸುವುದಕ್ಕೂ ಪೂರ್ವ ಮಾಧ್ಯಮ ಗೋಷ್ಟಿಯೊಂದನ್ನು ನಡೆಸಿ, ದೇಶದ ಪ್ರಸಕ್ತ ಪರಿಸ್ಥಿತಿಯ ಕಡೆಗೆ ಬೆಟ್ಟು ಮಾಡಿದ ಅವರು, ದೇಶದಲ್ಲಿ ಸಾಮಾನ್ಯ ವ್ಯಕ್ತಿ ಅತ್ಯಂತ ಕಷ್ಟದಲ್ಲಿದ್ದಾನೆ. ಇದಕ್ಕೂ ಮೊದಲು ಇಷ್ಟೊಂದು ಸಮಸ್ಯೆ ದೇಶ ಎದುರಿಸಿಲ್ಲ. ಪೆಟ್ರೋಲ್, ಅಡುಗೆ ಅನಿಲ, ದಿನಬಳಕೆ ವಸ್ತುಗಳ ಬೆಲೆ ಆಕಾಶ ಮುಟ್ಟಿವೆ. ಇದನ್ನು ಮರೆಮಾಚಲು ಮಂದಿರ ಮಸೀದಿಯ ಸಮಸ್ಯೆಗಳನ್ನು ಹುಟ್ಟುಹಾಕುರುವುದರ ಮೂಲಕ ದೇಶವನ್ನು ಒಡೆಯುವ ಪ್ರಯತ್ನ ನಡೆಯುತ್ತಿದೆ. ಭಾವನಾತ್ಮ ವಿಷಯಗಳನ್ನು ಹರಿಯಬಿಡುವುದರ ಮೂಲಕ ದೇಶವನ್ನು ಹಿಂದೂ-ಮುಸ್ಲಿಮ ಎಂದು ಒಡೆಯಲಾಗುತ್ತಿದೆ. ದೇಶದ ಮೂಲ ಸಮಸ್ಯೆಗಳನ್ನು ಬಗೆ ಹರಿಸುವ ಕಿಂಚಿತ್ತು ಪ್ರಯತ್ನ ಮಾಡದೆ ದೇಶವನ್ನು ಅರಾಜಕತೆಯತ್ತ ಕೊಂಡ್ಯೊಯ್ಯಲಾಗುತ್ತಿದೆ ಎಂದು ಆವರು ಆರೋಪಿಸಿದರು.

ಈ ಸಂದರ್ಭದಲ್ಲಿ ವೆಲ್ಫೇರ್ ಪಾರ್ಟಿಯ ರಾಜ್ಯಾಧ್ಯಕ್ಷ ನ್ಯಾಯವಾದಿ ತಾಹೀರ್ ಹುಸೇನ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುಭ್ರಮಣಿ ಅರ್ಮುಗಂ, ರಾಜ್ಯ ಪ್ರಧಾನ ಕಾರ್ಯದರ್ಶಿ ಹಬೀಬುಲ್ಲಾ ಖಾನ್, ಉ.ಕ. ಜಿಲ್ಲಾಧ್ಯಕ್ಷ ಡಾ.ನಸೀಮ್ ಖಾನ್, ಮಾಧ್ಯಮ ಕಾರ್ಯದರ್ಶಿ ಅಝೀಝ್ ಜಾಗರ‍್ದಾರ್  ಮತ್ತಿತರರು ಉಪಸ್ಥಿತರಿದ್ದರು. ‌

ಅಬ್ದುಲ್ ಜಬ್ಬಾರ್ ಅಸದಿ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News