ಮಂಕಿಪಾಕ್ಸ್: ಯುಎಇಯಲ್ಲಿ ಪ್ರಥಮ ಪ್ರಕರಣ ವರದಿ

Update: 2022-05-25 18:08 GMT
Photo: Twitter/@BellaKwai

ದುಬೈ, ಮೇ 25: ಮಂಕಿಪಾಕ್ಸ್ ಸಾಂಕ್ರಾಮಿಕದ ಪ್ರಥಮ ಪ್ರಕರಣ ಯುಎಇಯಲ್ಲಿ ಮಂಗಳವಾರ ವರದಿಯಾಗಿದ್ದು ಸೋಂಕನ್ನು ನಿಯಂತ್ರಿಸಲು ಸಕಲ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

 ಪಶ್ಚಿಮ ಆಫ್ರಿಕಾದಿಂದ ಆಗಮಿಸಿದ 29 ವರ್ಷದ ಮಹಿಳೆಯಲ್ಲಿ ಮಂಕಿಪಾಕ್ಸ್ ಕಾಯಿಲೆ ಪತ್ತೆಯಾಗಿದ್ದು ಅವರಿಗೆ ಚಿಕಿತ್ಸೆ ಒದಗಿಸಲಾಗುತ್ತಿದೆ. ಶಂಕಿತ ರೋಗಿಗಳನ್ನು ಪತ್ತೆಹಚ್ಚಲು ನಿಖರವಾದ ಕಾರ್ಯವಿಧಾನವನ್ನು ಇರಿಸಲಾಗಿದೆ. ಸಾಂಕ್ರಾಮಿಕದ ನಿಯಂತ್ರಣಕ್ಕಾಗಿ ತಾಂತ್ರಿಕ ಸಲಹಾ ತಂಡವು ಕಣ್ಗಾವಲು, ರೋಗದ ಆರಂಭಿಕ ಪತ್ತೆ, ಪ್ರಾಯೋಗಿಕವಾಗಿ ಸೋಂಕಿತ ರೋಗಿಗಳ ನಿರ್ವಹಣೆ ಮತ್ತು ಮುನ್ನೆಚ್ಚರಿಕೆ ಕ್ರಮಗಳಿಗಾಗಿ ಸಮಗ್ರ ಮಾರ್ಗದರ್ಶಿಯನ್ನು ಸಹ ಸಿದ್ಧಪಡಿಸಿದೆ ಎಂದು ಯುಎಇಯ ಆರೋಗ್ಯ ಇಲಾಖೆ ಹೇಳಿದೆ.

ಕೊರೋನ ಸಾಂಕ್ರಾಮಿಕದ ಬಳಿಕ ವಿಶ್ವದಲ್ಲಿ ಆತಂಕಕಾರಿಯಾಗಿ ಪ್ರಸಾರವಾಗುತ್ತಿರುವ ಮಂಕಿಪಾಕ್ಸ್ ಸಾಂಕ್ರಾಮಿಕದ ಪ್ರಕರಣ ಕಳೆದ ವಾರ ಇಸ್ರೇಲ್ನಲ್ಲಿ ಪತ್ತೆಯಾಗಿತ್ತು. ಇದೀಗ ಯುಎಇಯಲ್ಲಿ ವರದಿಯಾಗುವುದರೊಂದಿಗೆ ಮಧ್ಯಪ್ರಾಚ್ಯದ 2 ದೇಶಗಳಲ್ಲಿ ಈ ಸಾಂಕ್ರಾಮಿಕ ಪತ್ತೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News