×
Ad

ಭಾರೀ ಭದ್ರತೆಯ ಪ್ರತ್ಯೇಕ್ ಸೆಲ್‌ನಲ್ಲಿ ಯಾಸೀನ್ ಮಲಿಕ್: ತಿಹಾರ್ ಕಾರಾಗೃಹದ ಅಧಿಕಾರಿಗಳು

Update: 2022-05-26 23:54 IST

ಹೊಸದಿಲ್ಲಿ, ಮೇ 26: ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಪ್ರಕರಣದಲ್ಲಿ ದಿಲ್ಲಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ ದಿನದ ಬಳಿಕ ಮಲಿಕ್ ಅವರನ್ನು ಭಾರೀ ಭದ್ರತೆಯ ಪ್ರತ್ಯೇಕ ಸೆಲ್‌ನಲ್ಲಿ ಇರಿಸಲಾಗಿದೆ ಎಂದು ಇಲ್ಲಿನ ತಿಹಾರ್ ಕಾರಾಗೃಹದ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

‘‘ಭದ್ರತಾ ಕಾರಣಗಳಿಗಾಗಿ ಮಲಿಕ್ ಅವರಿಗೆ ಕಾರಾಗೃಹದಲ್ಲಿ ಯಾವುದೇ ಕೆಲಸ ನೀಡಿಲ್ಲ. 7ನೇ ಸಂಖ್ಯೆಯ ಕಾರಾಗೃಹದ ಭಾರೀ ಭದ್ರತೆಯ ಪ್ರತ್ಯೇಕ ಸೆಲ್‌ನಲ್ಲಿ ಅವರನ್ನು ಇರಿಸಲಾಗಿದೆ. ಅವರ ಭದ್ರತೆಯನ್ನು ನಿರಂತರ ಗಮನಿಸಲಾಗುತ್ತಿದೆ. ಆಗಾಗ ಪರಿಶೀಲಿಸಲಾಗುತ್ತಿದೆ’’ ಎಂದು ಕಾರಾಗೃಹದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಭಯೋತ್ಪಾದನೆಗೆ ಹಣಕಾಸಿನ ನೆರವು ನೀಡಿದ ಪ್ರಕರಣದಲ್ಲಿ ದೋಷಿ ಎಂದು ನ್ಯಾಯಾಲಯ ಪರಿಗಣಿಸಿದ ಬಳಿಕ ಮಲಿಕ್ ಅವರು ಯಾವುದೇ ಪರೋಲ್‌ಗೆ ಅರ್ಹರಲ್ಲ ಎಂದು ಕಾರಾಗೃಹದ ಅಧಿಕಾರಿಗಳು ತಿಳಿಸಿದ್ದಾರೆ. ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸುವ ಮುನ್ನವೇ ಮಲಿಕ್ ಅವರನ್ನು ಕಾರಾಗೃಹ ಸಂಖ್ಯೆ 7ರ ಪ್ರತ್ಯೇಕ ಸೆಲ್‌ನಲ್ಲಿ ಇರಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.

ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಪ್ರಕರಣದಲ್ಲಿ ದಿಲ್ಲಿ ನ್ಯಾಯಾಲಯ ಬುಧವಾರ ಮಲಿಕ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News