×
Ad

ʼಭಾರತದ ಅಧಿಕೃತ ಭಾಷೆ' ಹಿಂದಿಗೆ ಎಲ್ಲಾ ಕೆಲಸಕಾರ್ಯಗಳಲ್ಲಿ ಆದ್ಯತೆ ನೀಡಿ': ಇಲಾಖೆಗಳಿಗೆ ಎನ್‍ಡಿಎಂಸಿ ಸುತ್ತೋಲೆ

Update: 2022-05-27 17:57 IST
Photo: Facebook/ndmcgov

 ಹೊಸದಿಲ್ಲಿ: ಹೊಸದಿಲ್ಲಿ ಮುನಿಸಿಪಲ್ ಕಾರ್ಪೊರೇಷನ್ (ಎನ್‍ಡಿಎಂಸಿ) ತನ್ನ ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ಸುತ್ತೋಲೆ  ಕಳುಹಿಸಿ ಹಿಂದಿ ಭಾಷೆಗೆ  ಸಿಬ್ಬಂದಿ ಮತ್ತು ಅಧಿಕಾರಿಗಳು ಆದ್ಯತೆ ನೀಡಬೇಕೆಂದು ಸೂಚಿಸಿದೆ.

ಈ ಸುತ್ತೋಲೆಯಲ್ಲಿ ಹಿಂದಿಯನ್ನು ʼಭಾರತದ ಅಧಿಕೃತ ಭಾಷೆʼ ಎಂದು ಬಣ್ಣಿಸಲಾಗಿದೆ. ಎಲ್ಲಾ ಆದೇಶಗಳು, ಸುತ್ತೋಲೆಗಳು ಇಂಗ್ಲಿಷ್ ಜೊತೆಗೆ ಹಿಂದಿಯಲ್ಲಿರಬೇಕು ಹಾಗೂ ನೋಟಿಸ್ ಬೋರ್ಡ್, ನೇಮ್ ಪ್ಲೇಟ್‍ಗಳನ್ನೂ ಹಿಂದಿಯಲ್ಲಿಯೇ ಬರೆಯಬೇಕೆಂದು ಅದರಲ್ಲಿ ಸೂಚಿಸಲಾಗಿದೆ.

ಭಾರತದ ಅಧಿಕೃತ ಭಾಷೆ ಹಿಂದಿ ಎಂದು ಹೇಳಲು ಅಧಿಕೃತ ಭಾಷೆ ಕಾಯಿದೆ 1963 ಅನ್ನು ಸುತ್ತೋಲೆ ಉಲ್ಲೇಖಿಸಿದೆ. ಎಲ್ಲಾ ಅಧಿಕೃತ ಕೆಲಸವನ್ನು  ಹಿಂದಿಯಲ್ಲಿಯೇ ಕಡ್ಡಾಯವಾಗಿ ಮಾಡಬೇಕು, ಕಾನೂನಿನಲ್ಲಿ ತಿಳಿಸಿದಂತೆ ದಿಲ್ಲಿ `ಪ್ರಾಂತ್ಯ ಎ' ಅಡಿಯಲ್ಲಿ ಬರುತ್ತದೆ ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿದೆ.

ಸುತ್ತೋಲೆಗೆ ಕಾರ್ಪೊರೇಷನ್ ಕಾರ್ಯದರ್ಶಿ ಇಶಾ ಖೋಸ್ಲಾ ಅವರು ಸಹಿ ಹಾಕಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News