ಇಸ್ರೇಲ್ ವಿರುದ್ಧ ಕ್ರಮಕ್ಕೆ ಇರಾನ್ ಆಗ್ರಹ‌

Update: 2022-05-27 18:19 GMT

ಟೆಹ್ರಾನ್, ಮೇ 27: ಕಳೆದ ವಾರ ಇರಾನ್ನ ರೆವೊಲ್ಯುಷನರಿ ಗಾರ್ಡ್ನ ಯೋಧನನ್ನು ಹತ್ಯೆಗೈದಿರುವುದು ತಾನೇ ಎಂದು ಒಪ್ಪಿಕೊಂಡಿರುವ ಇಸ್ರೇಲ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಇರಾನ್ ವಿಶ್ವಸಂಸ್ಥೆಯನ್ನು ಆಗ್ರಹಿಸಿದೆ.

 ಈ ಹತ್ಯೆಯನ್ನು ಅಂತರಾಷ್ಟ್ರೀಯ ಸಮುದಾಯ ಖಂಡಿಸಬೇಕು ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ಗೆ ಬರೆದಿರುವ ಪತ್ರದಲ್ಲಿ ವಿಶ್ವಸಂಸ್ಥೆಗೆ ಇರಾನ್ ರಾಯಭಾರಿ ತಖ್ತ್ ರವಾಂಚಿ ಆಗ್ರಹಿಸಿದ್ದಾರೆ. ಈ ಪ್ರದೇಶದಲ್ಲಿ ತಮ್ಮ ಕಾನೂನುಬಾಹಿರ ವಿದೇಶಾಂಗ ನೀತಿ ಗುರಿಗಳನ್ನು ಮುನ್ನಡೆಸುವ ಉದ್ದೇಶದಿಂದ ಕೆಲವು ಆಡಳಿತಗಳು ಈ ದಾಳಿಯನ್ನು ರೂಪಿಸಿವೆ. ಭಯೋತ್ಪಾದನೆಯ ವಿರುದ್ಧ ನಿಜವಾದ ಹೋರಾಟ ಮತ್ತು ತಾರತಮ್ಯ ರಹಿತ ರೀತಿಯಲ್ಲಿ ಜವಾಬ್ದಾರಿ ನಿರ್ವಹಣೆಗೆ ಅನುಗುಣವಾಗಿ ವಿಶ್ವಸಂಸ್ಥೆ ಈ ಕ್ರೂರ ಕೃತ್ಯವನ್ನು ಖಂಡಿಸುವುದೆಂದು ನಿರೀಕ್ಷಿಸುತ್ತೇವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News