ಲಿಮಾನ್ ನಗರ ವಶಪಡಿಸಿರುವುದನ್ನು ದೃಢೀಕರಿಸಿದ ರಶ್ಯ

Update: 2022-05-28 18:03 GMT

ಮಾಸ್ಕೊ, ಮೇ 28: ಪೂರ್ವ ಉಕ್ರೇನ್ನ ಪ್ರಮುಖ ನಗರ ಲಿಮಾನ್ ಅನ್ನು ವಶಕ್ಕೆ ಪಡೆದಿರುವುದನ್ನು ರಶ್ಯ ಶನಿವಾರ ದೃಢೀಕರಿಸಿದೆ. ಡೊನೆಟ್ಸ್ಕ್ ಪೀಪಲ್ಸ್ ರಿಪಬ್ಲಿಕ್(ರಶ್ಯ ಪರ ಪ್ರತ್ಯೇಕತಾವಾದಿಗಳ ಸಂಘಟನೆ)ನ ಯೋಧರು ಮತ್ತು ರಶ್ಯ ಸೇನೆಯ ಜಂಟಿ ಕಾರ್ಯಾಚರಣೆಯಲ್ಲಿ ಲಿಮಾನ್ ನಗರವನ್ನು ಉಕ್ರೇನ್ ರಾಷ್ಟ್ರೀಯವಾದಿಗಳ ಹಿಡಿತದಿಂದ ಮುಕ್ತಗೊಳಿಸಲಾಗಿದೆ ಎಂದು ರಶ್ಯದ ರಕ್ಷಣಾ ಇಲಾಖೆ ಹೇಳಿದೆ. 

ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಂತ ಮಹತ್ವ ಪಡೆದಿರುವ ಉಕ್ರೇನ್ನ ಲಿಮಾನ್ ನಗರವನ್ನು ವಶಕ್ಕೆ ಪಡೆದಿರುವುದಾಗಿ ರಶ್ಯ ಪರ ಪ್ರತ್ಯೇಕತಾವಾದಿಗಳು ಶುಕ್ರವಾರ ಘೋಷಿಸಿದ್ದರು. ಉಕ್ರೇನ್ನ ಪೂರ್ವದ ನಗರಗಳನ್ನು ಸಂಪರ್ಕಿಸುವ ಹೆದ್ದಾರಿ ಲಿಮಾನ್ ನಗರದ ಮೂಲಕ ಸಾಗುತ್ತದೆ. ‘ರಶ್ಯದ ಸೇನೆಯೊಂದಿಗೆ ಪ್ರತ್ಯೇಕತಾವಾದಿ ಪಡೆಗಳು ಲಿಮಾನ್ ನಗರದ ಸಹಿತ 220 ಪ್ರದೇಶಗಳನ್ನು ವಿಮೋಚನೆಗೊಳಿಸಿ ಸಂಪೂರ್ಣ ನಿಯಂತ್ರಣಕ್ಕೆ ಪಡೆದಿವೆ ಎಂದು ಪ್ರತ್ಯೇಕಗೊಂಡ ಡೊನೆಟ್ಸ್ಕ್ ವಲಯದ ಪ್ರತಿನಿಧಿಗಳು ಹೇಳಿದ್ದಾರೆ. ಪೂರ್ವ ಡೊನೆಟ್ಸ್ಕ್ ವಲಯದ ಉತ್ತರದಲ್ಲಿರುವ ಲಿಮಾನ್ ನಗರದ ಮೂಲಕ ಸಾಗುವ ರಸ್ತೆಯು ಉಕ್ರೇನ್ ನಿಯಂತ್ರಣದಲ್ಲಿರುವ ಸ್ಲೊವಿಯಾಂಸ್ಕ್ ಮತ್ತು ಕ್ರಮಟೊರೊಸ್ಕ್ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News