ಜಪಾನ್ : ಕೆಂಪುಸೇನೆ ಸ್ಥಾಪಕಿ ಶಿಗೆನೊಬು ಜೈಲಿನಿಂದ ಬಿಡುಗಡೆ

Update: 2022-05-28 18:09 GMT

ಟೋಕಿಯೊ, ಮೇ 28: ಒಂದೊಮ್ಮೆ ಜನಸಾಮಾನ್ಯರಲ್ಲಿ ಭೀತಿ ಹುಟ್ಟಿಸಿದ್ದ ಜಪಾನ್ನ ಕೆಂಪುಸೇನೆಯ ಸ್ಥಾಪಕಿ ಫುಸಾಕೊ ಶಿಗೆನೊಬು 20 ವರ್ಷದ ಜೈಲುಶಿಕ್ಷೆ ಪೂರೈಸಿ ಶನಿವಾರ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.

 ಅಮಾಯಕ ಜನರಿಗೆ ನೋವುಂಟು ಮಾಡಿರುವುದಕ್ಕೆ ಕ್ಷಮೆ ಯಾಚಿಸುತ್ತಿದ್ದೇನೆ. ಅಂತಿಮವಾಗಿ ಜೀವಂತವಾಗಿ ಜೈಲಿನಿಂದ ಹೊರ ಬಂದಿರುವ ಬಗ್ಗೆ ಸಂತಸವಿದೆ ಎಂದು ಟೋಕಿಯೋದಲ್ಲಿ ತಮ್ಮನ್ನು ಸ್ವಾಗತಿಸಲು ಸೇರಿದ್ದ ಪುತ್ರಿಯರು ಹಾಗೂ ವರದಿಗಾರರ ಮತ್ತು ಬೆಂಬಲಿಗರ ಗುಂಪ್ನು ಉದ್ದೇಶಿಸಿ 76 ವರ್ಷದ ಶಿಗೆನೊಬು ಹೇಳಿರುವುದಾಗಿ ವರದಿಯಾಗಿದೆ. ಸುಮಾರು ಅರ್ಧ ಶತಮಾನದ ಹಿಂದೆ ನಾವು ಹಲವು ಅಮಾಯಕ ಜನರಿಗೆ ನೋವುಂಟು ಮಾಡಿದ್ದೆವು. 

ನಮ್ಮ ಹೋರಾಟಕ್ಕೆ ಆದ್ಯತೆ ನೀಡುವ ಸಂದರ್ಭ ಕೆಲವು ಅಪರಿಚಿತ, ಅಮಾಯಕ ಜನರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದೆವು. ಇದಕ್ಕಾಗಿ ನಾನು ಕ್ಷಮೆ ಯಾಚಿಸುತ್ತಿದ್ದೇನೆ. ನನ್ನ ಬಂಧನದಿಂದ ಅನೇಕ ಜನರಿಗೆ ಅನಾನುಕೂಲ ಆಗಿರುವುದಕ್ಕೂ ಕ್ಷಮೆ ಯಾಚಿಸುತ್ತೇನೆ ಎಂದು ಶಿಗೆನೊಬು ಹೇಳಿದ್ದಾರೆ. ಪೆಲೆಸ್ತೀನೀಯರ ಹೋರಾಟವನ್ನು ಬೆಂಬಲಿಸುವ ಎಡಪಂಥೀಯ ಕೆಂಪುಸೇನೆಯನ್ನು 1971ರಲ್ಲಿ ಲೆಬನಾನ್ನಲ್ಲಿ ಸ್ಥಾಪಿಸಿದ್ದ ಶಿಗೆನೊಬು  1970 ಮತ್ತು 80ರ ದಶಕದಲ್ಲಿ ವಿಶ್ವದ ಅತ್ಯಂತ ಕುಖ್ಯಾತ ಮಹಿಳೆಯೆಂದು ಗುರುತಿಸಿಕೊಂಡಿದ್ದರು. ಕೆಂಪು ಸೇನೆ ಹಲವೆಡೆ ಸಶಸ್ತ್ರ ದಾಳಿ, ವಿಮಾ ಅಪಹರಣ, ಗಣ್ಯರನ್ನು ಅಪಹರಿಸಿ ಒತ್ತೆಯಾಳುಗಳನ್ನಾಗಿಸುವ ಕೃತ್ಯದ ಮೂಲಕ ವಿಶ್ವದ ಅತ್ಯಂತ ಭಯಾನಕ ಸಶಸ್ತ್ರ ಸಂಘಟನೆ ಎಂದು ಹೆಸರಾಗಿತ್ತು. ಪೆಲೆಸ್ತೀನ್ ಹೋರಾಟಗಾರರನ್ನು ಬೆಂಬಲಿಸಿದ ಕೆಂಪುಸೇನೆ ಇಸ್ರೇಲ್ನ ಕಡುವೈರಿಯಾಗಿತ್ತು. ಇವರನ್ನು 2000ನೇ ಇಸವಿಯಲ್ಲಿ ಜಪಾನ್ನಲ್ಲಿ ಬಂಧಿಸಿ 20 ವರ್ಷದ ಜೈಲುಶಿಕ್ಷೆ ವಿಧಿಸಲಾಗಿತ್ತು.

ಇಸ್ರೇಲ್ನ ಟೆಲ್ಅವೀವ್ ನಗರದ ಲಾಡ್ ವಿಮಾನನಿಲ್ದಾಣದಲ್ಲಿ 1972ರಲ್ಲಿ ನಡೆದ ಮೆಷಿನ್ಗ್ ಮತ್ತು ಗ್ರೆನೇಡ್ ದಾಳಿಯ ಹಿಂದೆ ಶಿಗೆನೊಬು ಕೈವಾಡವಿದೆ ಎಂದು ಭಾವಿಸಲಾಗಿದೆ. ಈ ದಾಳಿಯಲ್ಲಿ 26 ಮಂದಿ ಮೃತಪಟ್ಟು ಇತರ 80 ಮಂದಿ ಗಾಯಗೊಂಡಿದ್ದರು. ಮಲೇಶ್ಯಾದ ಕೌಲಲಾಂಪುರದಲ್ಲಿ 1975ರಲ್ಲಿ ಅಮೆರಿಕ ರಾಯಭಾರ ಕಚೇರಿಯ ಮೇಲೆ ನಡೆದ ದಾಳಿಯ ಹೊಣೆಯನ್ನೂ ಕೆಂಪು ಸೇನೆ ವಹಿಸಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News