'ಬಿಜೆಪಿ ನಿಮ್ಮ ಮಕ್ಕಳನ್ನು ಗೂಂಡಾಗಳು ಮತ್ತು ಅತ್ಯಾಚಾರಿಗಳನ್ನಾಗಿ ಮಾಡುತ್ತದೆʼ: ಅರವಿಂದ ಕೇಜ್ರಿವಾಲ್

Update: 2022-05-29 11:14 GMT

ಕುರುಕ್ಷೇತ್ರ: ಪಂಜಾಬ್ ನಲ್ಲಿ ಸರ್ಕಾರ ರಚಿಸಿರುವ ಎಎಪಿ ಸದ್ಯ ಹರಿಯಾಣದ ಮೇಲೆ ಕಣ್ಣಿಟ್ಟಿದೆ. 2024 ರ ಹರ್ಯಾಣ ವಿಧಾನಸಭಾ ಚುನಾವಣೆಯ ಪ್ರಚಾರವನ್ನು ಪ್ರಾರಂಭಿಸಿದ ಎಎಪಿ ಮುಖ್ಯಸ್ಥ, ದಿಲ್ಲಿ ಸಿಎಂ ಅರವಿಂದ್‌ ಕೇಜ್ರೀವಾಲ್ ಬಿಜೆಪಿ ಸರ್ಕಾರದ ವಿರುದ್ಧ ಕಟುವಾದ ವಾಗ್ದಾಳಿ ನಡೆಸಿದ್ದಾರೆ.

ಕೇಂದ್ರದ ಮೋದಿ ಮತ್ತು ಮನೋಹರ್ ಲಾಲ್ ಖಟ್ಟರ್ ಅವರ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ತಮ್ಮ ಮಕ್ಕಳು ಗೂಂಡಾಗಳು, ಗಲಭೆಕೋರರು ಮತ್ತು ಅತ್ಯಾಚಾರಿಗಳಾಗಬೇಕೆಂದು ಬಯಸುವವರು, ಮಕ್ಕಳನ್ನು ಬಿಜೆಪಿಗೆ ಕಳುಹಿಸಲಿ ಎಂದು ಹೇಳಿದ್ದಾರೆ.

ಕುರುಕ್ಷೇತ್ರದಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅರವಿಂದ್ ಕೇಜ್ರಿವಾಲ್, ದಿಲ್ಲಿಯ ಎಎಪಿ ಸರ್ಕಾರವು ಸರ್ಕಾರಿ ಶಾಲೆಗಳನ್ನು ಬದಲಾಯಿಸಿದೆ. ಸರಕಾರಿ ಶಾಲೆಗಳ ವಿದ್ಯಾರ್ಥಿಗಳು ಈಗ ಖಾಸಗಿ ಶಾಲೆಗಳಿಗೆ ಸರಿಸಾಟಿಯಾಗಿ ಸಾಧನೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

"ಈ ವರ್ಷ 4 ಲಕ್ಷ ವಿದ್ಯಾರ್ಥಿಗಳು ಖಾಸಗಿ ಶಾಲೆಗಳನ್ನು ತೊರೆದು ದಿಲ್ಲಿ ಸರ್ಕಾರಿ ಶಾಲೆಗಳಿಗೆ ಸೇರಿದ್ದಾರೆ. ದಿಲ್ಲಿ ಸರ್ಕಾರಿ ಶಾಲೆಗಳ 400 ವಿದ್ಯಾರ್ಥಿಗಳು ಇಂಜಿನಿಯರಿಂಗ್ ಕೋರ್ಸ್‌ಗಳ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಪ್ರತಿಷ್ಠಿತ ಕಾಲೇಜುಗಳಲ್ಲಿ ಪ್ರವೇಶ ಪಡೆದಿದ್ದಾರೆ ಎಂದು ಅವರು ಹೇಳಿದ್ದಾರೆ.‌

 "ನಾನು ಸರಳ ಮನುಷ್ಯ, ನನಗೆ ರಾಜಕೀಯ ಗೊತ್ತಿಲ್ಲ, ನಾನು ದಿಲ್ಲಿ ಸರ್ಕಾರಿ ಶಾಲೆಗಳನ್ನು ಸುಧಾರಿಸಿದ್ದೇನೆ. ಶಾಲೆಗಳು ಈ ಬಾರಿ 99.7 ಶೇಕಡಾ ಫಲಿತಾಂಶವನ್ನು ಸಾಧಿಸಿವೆ. ಮೆಲಾನಿಯಾ ಟ್ರಂಪ್ (ಅಮೆರಿಕದ ಮಾಜಿ ಪ್ರಥಮ ಮಹಿಳೆ) ದಿಲ್ಲಿ ಸರ್ಕಾರಿ ಶಾಲೆಗಳನ್ನು ಭೇಟಿಯಾಗಲು ಬಂದಿದ್ದಾರೆ.  (ಮನೋಹರ್ ಲಾಲ್) ಖಟ್ಟರ್ ಸರ್ಕಾರಿ ಶಾಲೆಗೆ ಭೇಟಿ ನೀಡಲು ಯಾರು ಬರುತ್ತಾರೆ?” ಎಂದು ಕೇಜ್ರೀವಾಲ್‌ ಪ್ರಶ್ನಿಸಿದ್ದಾರೆ.

ಪಂಜಾಬ್‌ ವಶಪಡಿಸಿಕೊಂಡ ನಂತರ ಹರಿಯಾಣದ ಮೇಲೆ ಕಣ್ಣಿಟ್ಟಿರುವ ಕೇಜ್ರಿವಾಲ್, ಅವಕಾಶ ನೀಡಿದರೆ ಹರಿಯಾಣದ ಸರ್ಕಾರಿ ಶಾಲೆಗಳನ್ನು ದುರಸ್ತಿ ಮಾಡುವುದಾಗಿ ಭರವಸೆ ನೀಡಿದರು. ತಮ್ಮ ಮಕ್ಕಳು ಡಾಕ್ಟರ್, ಇಂಜಿನಿಯರ್, ಲಾಯರ್ ಆಗಬೇಕೆಂದು ಬಯಸುವವರು ನಮ್ಮ ಜೊತೆ ಸೇರಬೇಕು, ಗಲಭೆಕೋರರು, ಗೂಂಡಾಗಳು, ರೇಪಿಸ್ಟ್ ಗಳಾಗಬೇಕು ಎನ್ನುವವರು ಅವರ (ಬಿಜೆಪಿ)  ಜೊತೆ ಹೋಗುತ್ತಾರೆ. ಇಂತಹ ಎಲ್ಲ ಅಂಶಗಳು ಆ ಪಕ್ಷದಲ್ಲಿವೆ ಎಂದು ಹೇಳಿದ್ದಾರೆ.

ಅವರ ಪಕ್ಷಕ್ಕೆ ನಿರುದ್ಯೋಗಿ ಗೂಂಡಾಗಳು ಬೇಕು ಎಂದು ಅವರು ನಿಮ್ಮ ಮಕ್ಕಳಿಗೆ ಎಂದಿಗೂ ಕೆಲಸ ಕೊಡುವುದಿಲ್ಲ, ಅವರು ನಿಮ್ಮ ಮಕ್ಕಳಿಗೆ ದಂಗೆ ಕಲಿಸುತ್ತಾರೆ ಮತ್ತು ಅವರ ಮಕ್ಕಳನ್ನು ವಿದೇಶಕ್ಕೆ ಕಳುಹಿಸುತ್ತಾರೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News