​ಫ್ರೆಂಚ್ ಓಪನ್ ಕ್ವಾರ್ಟರ್ ಫೈನಲ್‍ನಲ್ಲಿ ನಡಾಲ್- ಜೋಕೊವಿಕ್ ಮುಖಾಮುಖಿ

Update: 2022-05-30 02:08 GMT
ಫೈಲ್‌ ಫೋಟೊ 

ಪ್ಯಾರೀಸ್: ದಾಖಲೆಗಳ ವೀರ, ಟೆನಿಸ್ ದಂತಕಥೆ ರಫೇಲ್ ನಡಾಲ್, ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಕ್ವಾರ್ಟರ್ ಫೈನಲ್‍ನಲ್ಲಿ ವಿಶ್ವದ ನಂಬರ್ ವನ್ ಆಟಗಾರ ನೊವಾಕ್ ಜೋಕೊವಿಕ್ ಅವರನ್ನು ಎದುರಿಸಲು ಸಜ್ಜಾಗಿದ್ದಾರೆ.

ಪ್ರಿಕ್ವಾರ್ಟರ್ ಫೈನಲ್‍ನಲ್ಲಿ ಸುಧೀರ್ಘ ಹೋರಾಟದ ಬಳಿಕ ಫೆಲಿಕ್ಸ್ ಆಗರ್ ಅಲಿಯಸ್ಸಿಮ್ ಅವರನ್ನು ಮಣಿಸಿ ನಡಾಲ್ ಮುಂದಿನ ಹಂತಕ್ಕೆ ತೇರ್ಗಡೆಯಾದರು.

13 ಬಾರಿಯ ಚಾಂಪಿಯನ್ ಮತ್ತು 21 ಗ್ರ್ಯಾಂಡ್‍ಸ್ಲಾಂ ಪ್ರಶಸ್ತಿಗಳ ಸರದಾರ ನಡಾಲ್ ಅವರು ರೊನಾಲ್ಡ್ ಗರಾಸೊದಲ್ಲಿ ಕೆನಡಿಯನ್ ಆಟಗಾರನನ್ನು ನಾಲ್ಕು ಗಂಟೆ 21 ನಿಮಿಷಗಳ ಸುಧೀರ್ಘ ಹೋರಾಟದಲ್ಲಿ 3-6, 6-3, 6-2, 3-6, 6-3 ಸೆಟ್‍ಗಳಿಂದ ಮಣಿಸಿದರು.

ಕಳೆದ ಹದಿನೇಳು ವರ್ಷಗಳಲ್ಲಿ ಪ್ಯಾರೀಸ್‍ನಲ್ಲಿ 111 ಪಂದ್ಯಗಳನ್ನು ಆಡಿರುವ ನಡಾಲ್, ಜಯಕ್ಕಾಗಿ ಐದನೇ ಸೆಟ್ ಸೆಣಸಿರುವುದು ಇದು ಮೂರನೇ ಬಾರಿ. ನಡಾಲ್ ಹಾಗೂ ಜೋಕೊವಿಕ್ ರೊನಾಲ್ಡ್ ಗರಾಸೊದಲ್ಲಿ 10ನೇ ಬಾರಿ ಮುಖಾಮುಖಿಯಾಗಲಿದ್ದಾರೆ. 2006ರ ಬಳಿಕ 59ನೇ ಮುಖಾಮುಖಿ ಇದಾಗಲಿದೆ.

"ನಾವು ಪರಸ್ಪರ ಚೆನ್ನಾಗಿ ತಿಳಿದುಕೊಂಡಿದ್ದೇವೆ. ನಾವು ಭಾರಿ ಇತಿಹಾಸ ಹೊಂದಿದ್ದೇವೆ. ನಾನು ಆಟದ ಬಗ್ಗೆ ಗಮನ ಹರಿಸುವುದನ್ನಷ್ಟೇ ಮಾಡಬಲ್ಲೆ; ಕೊನೆಯ ವರೆಗೂ ಹೋರಾಡಿ ನನ್ನ ಸಂಪೂರ್ಣ ಶ್ರಮ ಹಾಕಲಿದ್ದೇನೆ" ಎಂದು ನಡಾಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News