ಹಾರ್ದಿಕ್ ಪಾಂಡ್ಯ ಬಗ್ಗೆ ಶೋಯಬ್ ಅಖ್ತರ್ ಹೇಳಿದ್ದೇನು ಗೊತ್ತೇ ?

Update: 2022-05-30 02:37 GMT
ಹಾರ್ದಿಕ್ ಪಾಂಡ್ಯ - ಶೋಯಬ್ ಅಖ್ತರ್

ಹೊಸದಿಲ್ಲಿ: ಐಪಿಎಲ್ ಪಂದ್ಯಗಳಲ್ಲಿ ಆಲ್ ರೌಂಡ್ ಪ್ರದರ್ಶನದ ಜತೆಗೆ ಅತ್ಯುತ್ತಮ ನಾಯಕತ್ವ ಗುಣಗಳನ್ನು ಪ್ರದರ್ಶಿಸಿದ ಗುಜರಾತ್ ಟೈಟನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ, ಭಾರತ ಕ್ರಿಕೆಟ್ ತಂಡದ ನಾಯಕತ್ವದ ಬಾಗಿಲು ಬಡಿಯುತ್ತಿದ್ದಾರೆ ಎಂದು ಪಾಕಿಸ್ತಾನದ ಖ್ಯಾತ ಬೌಲರ್ ಶೋಯಬ್ ಅಖ್ತರ್ ಪ್ರತಿಕ್ರಿಯಿಸಿದ್ದಾರೆ.

ಚೊಚ್ಚಲ ನಾಯಕತ್ವದಲ್ಲೇ ಹಾರ್ದಿಕ್ ಪಾಂಡ್ಯ, ಗುಜರಾತ್ ತಂಡಕ್ಕೆ ಪ್ರಶಸ್ತಿ ತಂದುಕೊಟ್ಟಿದ್ದಾರೆ. ತಮ್ಮ ಅತ್ಯುತ್ತಮ ನಾಯಕತ್ವ ಕೌಶಲದ ಜತೆಗೆ ಪಾಂಡ್ಯ ಗುಜರಾತ್ ಟೈಟನ್ಸ್ ನ ಅಗ್ರಗಣ್ಯ ಸ್ಕೋರರ್ ಕೂಡಾ ಆಗಿದ್ದು, ಈ ಸೀಸನ್‍ನಲ್ಲಿ 15 ಪಂದ್ಯಗಳಲ್ಲಿ 44.3 ಸರಾಸರಿಯಲ್ಲಿ 487 ರನ್ ಗಳಿಸಿದ್ದಾರೆ. ‌ಫೈನಲ್ ಪಂದ್ಯದಲ್ಲಿ ಪಾಂಡ್ಯ 30 ಎಸೆತಗಳಲ್ಲಿ 34 ರನ್ ಗಳಿಸಿದ್ದಲ್ಲದೇ ಕೇವಲ 17 ರನ್‍ಗಳಿಗೆ 3 ವಿಕೆಟ್ ಕಬಳಿಸಿ ಗೆಲುವಿನ ರೂವಾರಿ ಎನಿಸಿದ್ದರು.

"ಹಾರ್ದಿಕ್ ಪಾಂಡ್ಯ ತಮ್ಮ ಹೆಜ್ಜೆ ಗುರುತು ಮೂಡಿಸಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ನಾಯಕತ್ವದ ಬಾಗಿಲು ತಟ್ಟುತ್ತಿದ್ದಾರೆ. ರೋಹಿತ್ ಶರ್ಮಾ ಕ್ಯಾಪ್ಟನ್ ಆಗಿ ಎಷ್ಟು ಸಮಯ ಮುಂದುವರಿಯುತ್ತಾರೆ ಎನ್ನುವ ಖಾತರಿ ಇಲ್ಲ" ಎಂದು ಸ್ಪೋರ್ಟ್ಸ್ ಕೀಡಾ ಜತೆಗಿನ ಸಂವಾದದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಹಾರ್ದಿಕ್ ತಮ್ಮ ಫಿಟ್ನೆಸ್ ಹಾಗೂ ಬೌಲಿಂಗ್ ಬಗ್ಗೆ ಹೆಚ್ಚಿನ ಗಮನ ಕೇಂದ್ರೀಕರಿಸಬೇಕು ಎಂದು ಅವರು ಸಲಹೆ ಮಾಡಿದ್ದಾರೆ. ಏಕೆಂದರೆ ಕೇವಲ ಬ್ಯಾಟ್ಸ್ ಮನ್ ಆಗಿ ಭಾರತ ತಂಡದಲ್ಲಿ ಸ್ಥಾನ ಪಡೆಯುವುದು ಕಷ್ಟ ಎನ್ನುವುದು ಅವರ ಅಭಿಮತ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News