×
Ad

UPSC ಟಾಪರ್ ಶೃತಿ ಶರ್ಮಾ : ಜಾಮಿಯಾ ಮಿಲ್ಲಿಯದಲ್ಲಿ ಕೋಚಿಂಗ್ ಪಡೆದ ಜೆಎನ್‌ಯು ವಿದ್ಯಾರ್ಥಿನಿ

Update: 2022-05-31 10:13 IST

ಹೊಸದಿಲ್ಲಿ: ಯುಪಿಎಸ್‍ಸಿ ಸಿವಿಲ್ ಸರ್ವಿಸಸ್ 2021ರಲ್ಲಿ ಟಾಪರ್ ಆಗಿ ಹೊರಹೊಮ್ಮಿರುವ ಶೃತಿ ಶರ್ಮಾ ಅವರು ಜಾಮಿಯಾ ಮಿಲ್ಲಿಯದಲ್ಲಿ ಕೋಚಿಂಗ್ ಪಡೆದ ಜೆಎನ್‍ಯುವಿನ ಹಳೆ ವಿದ್ಯಾರ್ಥಿನಿಯಾಗಿದ್ದಾರೆ.

ಉತ್ತರ ಪ್ರದೇಶದ ಬಿಜ್ನೋರ್ ಮೂಲದವರಾಗಿರುವ ಶೃತಿ ಶರ್ಮಾ ದಿಲ್ಲಿಯ ಸೈಂಟ್ ಸ್ಟೀಫನ್ಸ್ ಕಾಲೇಜಿನ  ಹಳೆ ವಿದ್ಯಾರ್ಥಿನಿಯಾಗಿದ್ದು ನಂತರ ಜೆಎನ್‍ಯುವಿನಲ್ಲಿ ಸ್ನಾತ್ತಕೋತ್ತರ ಶಿಕ್ಷಣ ಪಡೆದಿದ್ದಾರೆ.

ಇತಿಹಾಸ ವಿದ್ಯಾರ್ಥಿನಿಯಾಗಿದ್ದ ಆಕೆ ಪದವಿ ಶಿಕ್ಷಣ ಪೂರ್ಣಗೊಳಿಸುತ್ತಿದ್ದಂತೆಯೇ ಐಎಎಸ್ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲು ಆರಂಭಿಸಿದ್ದರು. ತನ್ನ ಯಶಸ್ಸಿಗೆ ತಾನು ಕೋಚಿಂಗ್ ಪಡೆದ ಜಾಮಿಯಾ ರೆಸಿಡೆನ್ಶಿಯಲ್ ಕೋಚಿಂಗ್‍ಗೂ ಆಭಾರಿಯಾಗಿದ್ದೇನೆ ಎಂದು ಶೃತಿ ಶರ್ಮಾ ಹೇಳಿದ್ದಾರೆ.

ಮುಂದೆ ಶೃತಿ ಶರ್ಮಾ ಉತ್ತರ ಪ್ರದೇಶ ಐಎಎಸ್ ಕೇಡರ್ ಸೇರುವ ಉದ್ದೇಶ ಹೊಂದಿದ್ದಾರೆ.

ಈ ಬಾರಿ ಯುಪಿಎಸ್‍ಸಿಯಲ್ಲಿ ಮೊದಲ ಮೂರು ಸ್ಥಾನಗಳನ್ನು ಮಹಿಳಾ ಅಭ್ಯರ್ಥಿಗಳೇ ಪಡೆದಿರುವುದು ವಿಶೇಷವಾಗಿದೆ. ಎರಡನೇ ರ‍್ಯಾಂಕ್ ಅನ್ನು  ಅಂಕಿತಾ ಅಗರ್ವಾಲ್ ಪಡೆದಿದ್ದರೆ ಮೂರನೇ ರ‍್ಯಾಂಕ್ ಐಶ್ವರ್ಯ ವರ್ಮ ಅವರ ಪಾಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News