ಕೆಸಿಎಫ್ ದುಬೈ ಫಸ್ಟ್ ಸ್ಟೆಪ್ ಕಾರ್ಯಾಗಾರ

Update: 2022-05-31 11:03 GMT

ದುಬೈ: ಕರ್ನಾಟಕ ಕಲ್ಚರಲ್ ಫೌಂಡೇಶನ್ ಯುಎಇ - ಕೆಸಿಎಫ್ ದುಬೈ ನಾರ್ತ್ ಝೋನ್ ವತಿಯಿಂದ ಫಸ್ಟ್ ಸ್ಟೆಪ್ ಕಾರ್ಯಾಗಾರ ರಿವೋಕ್ ಓಷಾ ಶಿಕ್ಷಣ ಸಂಸ್ಥೆ ಅಲ್ ಕಿಸೈಸ್ ದುಬೈಯಲ್ಲಿ ಇತ್ತೀಚಿಗೆ ನಡೆಯಿತು.

ದುಬೈ ನಾರ್ತ್ ಝೋನ್ ಸಂಘಟನಾ ವಿಭಾಗ ಅಧ್ಯಕ್ಷರಾದ ಲತೀಫ್ ಪಾತೂರು ರವರ ಅಧ್ಯಕ್ಷತೆಯಲ್ಲಿ ನಡೆದ ಪ್ರಸ್ತುತ ಶಿಬಿರವನ್ನು ಕೆಸಿಎಫ್ ಯುಎಇ ರಾಷ್ಟ್ರೀಯ ಸಮೀತಿ ಸಂಘಟನಾ ವಿಭಾಗ ಅಧ್ಯಕ್ಷರಾದ ಇಕ್ಬಾಲ್ ಕಾಜೂರ್ ಉದ್ಘಾಟಿಸಿದರು. ದುಬೈ ನಾರ್ತ್ ಝೋನ್ ಸಂಘಟನಾ ವಿಭಾಗ ಕಾರ್ಯದರ್ಶಿ ಮುಸ್ತಫಾ ಮಾಸ್ಟರ್ ತರಗತಿ ನಡೆಸಿಕೊಟ್ಟರು.

ದುಬೈ ನಾರ್ತ್ ಝೋನ್ ಅಧ್ಯಕ್ಷರಾದ ಇಸ್ಮಾಯಿಲ್ ಹಾಜಿ ಮದನಿನಗರ ಮುಂದಿನ ಯೋಜನೆಯನ್ನು ಉದ್ಘಾಟನೆ ಮಾಡಿದರು. ದುಬೈ ನಾರ್ತ್ ಝೋನ್ ನಾಲೆಡ್ಜ್ ವಿಭಾಗದ ಅಧ್ಯಕ್ಷರಾದ ಅಬ್ದುಲ್ ಹಮೀದ್ ಸಖಾಫಿ, ಕಾರ್ಯದರ್ಶಿ ಅಬ್ಬಾಸ್ ಮಂಜನಾಡಿ, ಇಹ್ಸಾನ್ ವಿಭಾಗದ ಕಾರ್ಯದರ್ಶಿ ಮುಹಮ್ಮದ್ ಅಲಿ ಅಬ್ಬೆಟ್ಟು ಉಪಸ್ಥಿತರಿದ್ದರು.

ಅಲ್ ಕಿಸೈಸ್, ಅಲ್ ಮುರಾರ್, ಹೊರ್ಲ್ ಅಂಜ್, ನೈಫ್ ಮತ್ತು ನಖಿಲ್ ಸೆಕ್ಟರ್ ಗಳ ಕ್ಯಾಬಿನೇಟ್ ನಾಯಕರು ಕಾರ್ಯಾಗಾರದಲ್ಲಿ ಭಾಗವಹಿಸಿದರು. ಕೆಸಿಎಫ್ ದುಬೈ ನಾರ್ತ್ ಝೋನ್ ಪ್ರ.ಕಾರ್ಯದರ್ಶಿ ನಿಯಾಝ್ ಬಸರ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News