ರೈತರು ನೀರನ್ನು ಮಿತವಾಗಿ, ವೈಜ್ಞಾನಿಕವಾಗಿ ಬಳಸಿ : ಸಚಿವ ಕಾರಜೋಳ ಕರೆ

Update: 2022-06-01 10:37 GMT

ಕಾರ್ಕಳ: ಎಣ್ಣಿಹೊಳೆ ಏತ ನೀರಾವರಿ ಯೋಜನೆ 2 ಕೆರೆಗಳನ್ನು ಹಾಗೂ 45 ಚೆಕ್ ಡ್ಯಾಮ್ ಗಳನ್ನು ತುಂಬಿಸುವ ಬಹಳ ಸುಂದರವಾದ ಯೋಜನೆ. ಇದರಿಂದಾಗಿ 28 ಲಕ್ಷ ಎಕ್ರೆ ಭೂಪ್ರದೇಶಕ್ಕೆ ನೀರಾವರಿ ಸೌಲಭ್ಯ ಸಿಗುವಂತಾಗಿದೆ ಆದರೂ ಶೇ 15 ರಷ್ಟು ಕೃಷಿ ಭೂಮಿ ಬರಡಾಗಿಯೇ ಉಳಿಯುತ್ತವೆ. ರೈತರು ಎಚ್ಚೆತ್ತುಕೊಂಡು
ನೀರನ್ನು ಮಿತವಾಗಿ ವೈಜ್ಞಾನಿಕವಾಗಿ ಬಳಸಿದರೆ ಮಾತ್ರ ಭೂಮಿಯನ್ನು ಸುರಕ್ಷಿತ ವಾಗಿ ಕಾಪಾಡಲು ಸಾಧ್ಯವಾಗುತ್ತದೆ. ಬರಡು ಭೂಮಿಯನ್ನು ಫಲವತ್ತಾದ ಭೂಮಿ ಯನ್ನಾಗಿ ಮಾಡಬಹುದಾಗಿದೆ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದರು.

ಅವರು ಕಾರ್ಕಳ ತಾಲೂಕಿನ ಎಣ್ಣಿ ಹೊಳೆ ಎತ ನೀರಾವರಿ ಯೋಜನೆಯ ಲೋಕಾರ್ಪಣೆ ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ರೈತರಿಗೆ ಕರೆ ನೀಡಿದರು.

ಬೊಮ್ಮಾಯಿ ಸರಕಾರ ನೀರಾವರಿ ಯೋಜನೆ ಗಳಿಗೆ ಹೆಚ್ಚು ಹೆಚ್ಚು ಅನುದಾನಗಳನ್ನು ನೀಡುತ್ತಿದೆ. ಬ್ರಹತ್ ಮೇಲ್ದಂಡೆ ಯೋಜನೆಗೆ 5000 ಕೋಟಿ , ಎತ್ತಿನಹೊಳೆ ಯೋಜನೆ ,ಭದ್ರಾ ಯೋಜನೆಗೆ ತಲಾ 3000 ಸಾವಿರ ಕೋಟಿ, ಮೇಕೆದಾ.ಟು, ತುಂಗಭದ್ರಾ ಮೇಲ್ದಂಡೆ ಯೋಜನೆಗೆ ತಲಾ 1000 ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಳಿಸಿದೆ. ಒಂದೇ ವರ್ಷದಲ್ಲಿ ಹೆಚ್ಚು ಹೆಚ್ಚು ಯೋಜನೆ ಅನುಷ್ಠಾನದ ಜೊತೆಗೆ ಅತ್ಯಂತ ಪ್ರಾಮುಖ್ಯತೆ ಪಡೆದ ಕನಸಿಸ ಯೋಜನೆ ಆಗಿದೆ ಎಂದರು

ಕಡು ಬಡವರಿಗೆ ನೆಲ, ಜಲ, ಬೆಳಕು : ಕೋಟ

ರಾಜ್ಯದ ಬಡ ಜನತೆಗೆ ನೆಲ, ಜಲ, ಬೆಳಕು ನೀಡುವಂತಹ ಯೋಜನೆ ಸುನೀಲ್ ಕುಮಾರ್ ‌ಮಹತ್ವಕಾಂಕ್ಷೆಯ ಯೋಜನೆಯಾಗಿದೆ. ಇದರಿಂದಾಗಿ ರಾಜ್ಯದ 24.5 ಲಕ್ಷ ಕುಟುಂಬಕ್ಕೆ ಉಪಯೋಗವಾಗಲಿದೆ. ಪ್ರತಿ ಕುಟುಂಬ ಗಳಿಗೆ 75  ಯುನಿಟ್ ಉಚಿತ ವಿದ್ಯುತ್ ನೀಡುತ್ತಿದೆ ಇದರಿಂದಾಗಿ ಸುಮಾರು 641 ಕೋಟಿ ರೂಪಾಯಿ ಹೆಚ್ಚು ಖರ್ಚು ತಗಲುತ್ತದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಗಂಗಾ ಮಾತೆಯೇ ಕಾರ್ಕಳಕ್ಕೆ ಇಳಿದು ಬಂದಂತಾಗಿದೆ. ಇದರಿಂದಾಗಿ ನನ್ನ ಉಸ್ತುವಾರಿ ಯ ಉ.ಕ.ಜಿಲ್ಲೆಯ ಜನತೆಗೆ ತುಂಬಾ ಅನುಕೂಲವಾಗಿದೆ. ನಮಗೆಲ್ಲರಿಗೂ ಸುನೀಲ್ ಕುಮಾರ್ ಸ್ಪೂರ್ತಿ, ಶಕ್ತಿ ಹಾಗೂ ಇಂಧನ ಆಗಿದ್ದಾರೆ ಎಂದರು.

ಸಚಿವ ಸುನೀಲ್ ಕುಮಾರ್ ಮಾತನಾಡುತ್ತಾ ಎಣ್ಣಿಹೊಳೆ ಏತ ನೀರಾವರಿ ಯೋಜನೆಯಿಂದಾಗಿ 48  ಕಡೆಗಳಲ್ಲಿ ಚೆಕ್ ಡ್ಯಾಮ್ ಗಳಿಗೆ ನೀರು ಹರಿಸಿ  1.5 ಸಾವಿರ ಎಕ್ರೆ   ಭೂಮಿಯ ಕೃಷಿ ಚಟುವಟಿಕೆಗಳಿಗೆ ಉಪಯೋಗ ಆಗುತ್ತದೆ. ಡೀಮ್ಡ್ ಫಾರೆಸ್ಟ್ ಸಮಸ್ಯೆ ಇಂದು ನಿನ್ನೆಯದಲ್ಲ ಸರಕಾರ ಇದನ್ನು ಪರಿಣಾಮ ಕಾರಿಯಾಗಿ ಬಗೆಹರಿಸಿದೆ. ಬಜೆಟ್ ನಲ್ಲಿ ಘೋಷಿಸಿದ ಯೋಜನೆಯನ್ನು ಅತ್ಯಂತ ತ್ವರಿತವಾಗಿ ಕಾರ್ಯರೂಪಕ್ಕೆ ತರಲಾಗುತ್ತದೆ. ಈಗಾಗಲೇ ಸುಮಾರು 180 ಯೋಜನೆಗೆ ಸರಕಾರಿ ಆದೇಶ ನೀಡಲಾಗಿದೆ ಎಂದರು.

ವೇದಿಕೆಯಲ್ಲಿ ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವ ಅಂಗಾರ , ಕಂದಾಯ ಸಚಿವ ಆರ್ ಅಶೋಕ್,  ಶಾಸಕರಾದ ಲಾಲಾಜಿ ಮೆಂಡನ್, ರಘುಪತಿ ಭಟ್, ಸುಕುಮಾರ್ ಶೆಟ್ಟಿ, ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್, ಕರಾವಳಿ ಪ್ರಾಧಿಕಾರದ ಅಧ್ಯಕ್ಷ, ಜಿ ಪಂ ಕಾರ್ಯ ನಿರ್ವಹಣಾದಿಕಾರಿ, ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News