ಸಿಧು ಮೂಸೆವಾಲಾ ಅವರ ಮನೆಗೆ ಭೇಟಿ ನೀಡದಂತೆ ಆಪ್ ಶಾಸಕರಿಗೆ ತಡೆಯೊಡ್ಡಿದ ಗ್ರಾಮಸ್ಥರು

Update: 2022-06-03 07:26 GMT
Photo:twitter

ಪಂಜಾಬ್: ಪಂಜಾಬಿನ ಮಾನ್ಸಾ ಜಿಲ್ಲೆಯ ಮೂಸಾ ಗ್ರಾಮದಲ್ಲಿರುವ ಹತ್ಯೆಗೀಡಾದ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಮನೆಗೆ ಶುಕ್ರವಾರ ಆಗಮಿಸಿದ ಎಎಪಿ ಶಾಸಕ ಗುರುಪ್ರೀತ್ ಸಿಂಗ್ ಬನವಾಲಿ ಅವರಿಗೆ ತೀವ್ರ ವಿರೋಧ ವ್ಯಕ್ತವಾಗಿದೆ.

ಗ್ರಾಮಸ್ಥರು ಪ್ರತಿಭಟನೆ ನಡೆಸಿ ಬನವಾಲಿ  ಮನೆಗೆ ಬರದಂತೆ ತಡೆದರು.

ಬನವಾಲಿಯವರನ್ನು ಸುತ್ತುವರೆದ ಗ್ರಾಮಸ್ಥರು "ಆಮ್ ಆದ್ಮಿ ಪಾರ್ಟಿ ಮುರ್ದಾಬಾದ್" ಹಾಗೂ  "ಆಮ್ ಆದ್ಮಿ ಪಾರ್ಟಿ ನೆ ಮಾರಾ ಥಾ (ಎಎಪಿ ಅವನನ್ನು ಕೊಂದಿತು)" ಎಂದು ಕೂಗಿ  ಅವರ ದಾರಿಗೆ ಅಡ್ಡ ಬಂದರು.

ಸರ್ದುಲ್‌ಗಢ ಶಾಸಕ ಜನರಿಗೆ ಅವಕಾಶ ನೀಡುವಂತೆ ವಿನಂತಿಸುತ್ತಿರುವುದು ಕಂಡು ಬಂತು. ಅದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಯಲ್ಲಿ ಅವರು ಹಿಂತಿರುಗಬೇಕಾಯಿತು.

ಮಾನ್ಸಾ ಎಸ್‌ಎಸ್‌ಪಿ ಗೌರವ್ ಟೂರಾ ಸೇರಿದಂತೆ ಪಂಜಾಬ್ ಪೊಲೀಸ್‌ನ ಹಿರಿಯ ಅಧಿಕಾರಿಗಳು ಬನವಾಲಿ ನಿರ್ಗಮಿಸಿದ ಸ್ವಲ್ಪ ಸಮಯದ ನಂತರ ಮೂಸವಾಲಾ ಅವರ ನಿವಾಸವನ್ನು ತಲುಪಿದರು. ಪ್ರತಿಭಟನೆಯ ನಂತರ ಹಿಂಪಡೆದಿದ್ದ ಪೊಲೀಸ್ ನಿಯೋಜನೆಯನ್ನು ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಯೋಜಿತ ಭೇಟಿಯ ನಡುವೆ  ಮತ್ತೆ ಹೆಚ್ಚಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News