ವಿಧಾನಸಭೆ ಉಪ ಚುನಾವಣೆ: ಕೇರಳದಲ್ಲಿ ಯುಡಿಎಫ್‌ನ ಉಮಾ ಥಾಮಸ್ ಗೆ ಮುನ್ನಡೆ

Update: 2022-06-03 05:28 GMT
ಸಾಂದರ್ಭಿಕ ಚಿತ್ರ , Photo:PTI

ಹೊಸದಿಲ್ಲಿ:ಈ ವಾರದ ಆರಂಭದಲ್ಲಿ  ಮೂರು ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ  ಮತಗಳ ಎಣಿಕೆ ಶುಕ್ರವಾರ ಬೆಳಗ್ಗೆ ಆರಂಭವಾಗಿದೆ. ಒಡಿಶಾದ ಬ್ರಜರಾಜನಗರ, ಕೇರಳದ ತ್ರಿಕ್ಕಕರ ಹಾಗೂ  ಉತ್ತರಾಖಂಡದ ಚಂಪಾವತ್  ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು.

ಉತ್ತರಾಖಂಡದಲ್ಲಿ ಹಾಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಚಂಪಾವತ್ ವಿಧಾನಸಭಾ ಕ್ಷೇತ್ರದಿಂದ  ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.

ಕೇರಳದ ಎರ್ನಾಕುಲಂ ಜಿಲ್ಲೆಯ ತ್ರಿಕ್ಕಕರ ವಿಧಾನಸಭಾ ಕ್ಷೇತ್ರದಲ್ಲಿ ಎಲ್‌ಡಿಎಫ್‌ನ ಜೋ ಜೋಸೆಫ್ ಅವರು ಯುಡಿಎಫ್‌ನ ಉಮಾ ಥಾಮಸ್ ಅವರಿಗಿಂತ 11,000 ಕ್ಕೂ ಹೆಚ್ಚು ಮತಗಳಿಂದ ಹಿನ್ನಡೆಯಲ್ಲಿದ್ದಾರೆ.

 ಮಾತೃಭೂಮಿ ಸುದ್ದಿ ವಾಹಿನಿಯ ಪ್ರಕಾರ ಉಮಾ ಥಾಮಸ್ ಅವರು  11,057  ಮತಗಳಿಂದ ಮುನ್ನಡೆಯಲ್ಲಿದ್ದಾರೆ.

ಚುನಾವಣಾ ಆಯೋಗದ ಅಧಿಕೃತ ಅಪ್‌ಡೇಟ್ ಪ್ರಕಾರ, ಮೂರು ಸುತ್ತುಗಳ ಎಣಿಕೆಯನ್ನು ಪೂರ್ಣಗೊಳಿಸಿದ ಉಮಾ ಅವರು 6, 488 ಮತಗಳಿಂದ  ಮುನ್ನಡೆ ಸಾಧಿಸಿದ್ದಾರೆ.

ಚಂಪಾವತ್ ಉಪಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, 9 ಸುತ್ತಿನ ಮತ ಎಣಿಕೆಯ ನಂತರ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ನಿರ್ಮಲಾ ಗೆಹ್ಟೋಡಿ ಅವರ ವಿರುದ್ಧ 35,839 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News