ನನ್ನ ಹತ್ಯೆಗೆ ಬಿಜೆಪಿ ಯತ್ನ: ರೈತ ಮುಖಂಡ ರಾಕೇಶ್ ಟಿಕಾಯತ್ ಆರೋಪ

Update: 2022-06-04 03:29 GMT

ಮೀರಠ್: ನನ್ನ ಹತ್ಯೆಗೆ ಬಿಜೆಪಿ ಸಂಚು ರೂಪಿಸಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್ ಆಪಾದಿಸಿದ್ದಾರೆ ಎಂದು Thenewindianexpress.com ವರದಿ ಮಾಡಿದೆ.

ಕರ್ನಾಟಕದಲ್ಲಿ ಇತ್ತೀಚೆಗೆ ತಮಗೆ ಮಸಿ ಎರಚಿದ ಘಟನೆ ಪೂರ್ವ ನಿಯೋಜಿತ ಪಿತೂರಿ ಎಂದು ಅವರು ಹೇಳಿದ್ದಾರೆ. "ಟಿಕಾಯತ್ ಕುಟುಂಬವನ್ನು ಮತ್ತು ಸಂಘಟನೆಯನ್ನು ಒಡೆಯಲು ಸರ್ಕಾರ ನನ್ನನ್ನು ಕೊಲ್ಲಿಸಲು ಬಯಸಿದೆ. ಆದರೆ ಇದು ಎಂದಿಗೂ ಸಾಧ್ಯವಾಗದು" ಎಂದು ಅವರು ಹೇಳಿದರು.

ಮೀರಠ್ ಜಿಲ್ಲೆಯ ಜಂಗೇತಿ ಗ್ರಾಮದ ಧರ್ಮೇಶ್ವರಿ ಫಾರ್ಮ್‍ಹೌಸ್‍ನಲ್ಲಿ ನಡೆದ ಬಿಕೆಯು ಸಭೆಯಲ್ಲಿ ಅವರು ಮಾತನಾಡಿದರು.

ಮಹಾತ್ಮಗಾಂಧೀಜಿಯವರನ್ನು ಪಿತೂರಿಯಿಂದ ಹತ್ಯೆ ಮಾಡಿದಂತೆ, ಇದೀಗ ರಾಷ್ಟ್ರದ ಪರ ಹಾಗೂ ರೈತರ ಪರ ಧ್ವನಿ ಎತ್ತಿದವರನ್ನು ಗುರಿ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಮಾಡಿದರು.

ಟಿಕಾಯತ್‍ಗೆ ಯಾವುದೇ ಹಾನಿಯಾದರೆ, ಟಿಕಾಯತರು ದೇಶದಲ್ಲಿ ಇನ್ಕ್ವಿಲಾಬ್ ಧ್ವಜ ಹಾರಿಸಲು ಸಿದ್ಧರಿದ್ದಾರೆ ಎಂದು ಹೇಳಿದರು. ಕೇಂದ್ರದ ಮೇಲೆ ಹರಿಹಾಯ್ದ ಅವರು, ಬಿಕೆಯು ಏಕತೆಯನ್ನು ಒಡೆಯಲು ಕೇಂದ್ರ ಯತ್ನಿಸುತ್ತಿದೆ. ಆದರೆ ಇದು ಸಾಧ್ಯವಿಲ್ಲ. ಏಕೆಂದರೆ ಅದು ಏಕತೆ ಎಂದು ಬಣ್ಣಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News