ಅರಣ್ಯವಾಸಿಗಳ ಮೇಲೆ ಸರಕಾರ ಪ್ರತಿರೋಧ ನೀತಿಗೆ ಅವಕಾಶವಿಲ್ಲ: ಎಚ್.ಎನ್. ನಾಗಮೋಹನದಾಸ

Update: 2022-06-04 17:52 GMT

ಶಿರಸಿ: ಅರಣ್ಯವಾಸಿ ಭೂಮಿ ಹಕ್ಕಿಗೆ ಸರಕಾರ ಪರಿಹಾರ ಒದಗಿಸಬೇಕು. ಅರಣ್ಯವಾಸಿಗಳಿಗೆ ಅರಣ್ಯ ಭೂಮಿ ಅನಿವಾರ್ಯ. ಅರಣ್ಯವಾಸಿಗಳ ವಿರುದ್ಧ ಸರಕಾರ ಪ್ರತಿರೋಧ ನೀತಿ ಅನುಸರಿಸಬಾರದೆಂದು ಸುಪ್ರೀಂ ಕೋರ್ಟ್‌ ವಿಶ್ರಾಂತ ನ್ಯಾಯಮೂರ್ತಿ ಎಚ್.ಎನ್ ನಾಗಮೋಹನದಾಸ ಅವರು ಹೇಳಿದರು.

ಅವರು ಇಂದು ಶಿರಸಿಯ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ‘ಅರಣ್ಯ ಭೂಮಿ ಹಕ್ಕು ; ಸುಪ್ರೀಂ ಕೋರ್ಟ್’ ರಾಜ್ಯಮಟ್ಟದ ಚಿಂತನ ಕೂಟದಲ್ಲಿ ವಿಶೇಷ ಆಮಂತ್ರಿತರಾಗಿ ಮಾತನಾಡುತ್ತಾ ಹೇಳಿದರು.

ಅರಣ್ಯವಾಸಿಗಳ ಬದುಕು ಅರಣ್ಯದೊಂದಿಗೆ ಹೊಂದಿಕೊಂಡಿದೆ. ಅರಣ್ಯವಾಸಿಗಳನ್ನ ಅರಣ್ಯ ಭೂಮಿಯಿಂದ ಬೇರ್ಪಡಿಸುವುದು ಸಕಾರಣವಲ್ಲ. ಅರಣ್ಯ ಭೂಮಿ ಅರಣ್ಯವಾಸಿಗಳಿಗೆ ಒದಗಿಸದೇ ಇದ್ದಲ್ಲಿ ಸಾಮಾಜಿಕ ಕಾಂತ್ರಿಗೆ ನಾಂದಿ ಆಗುವುದು. ಅರಣ್ಯವಾಸಿಗಳ ದೌರ್ಜನ್ಯ ಯಾವ ಧರ್ಮ, ಕಾನೂನು ಕೂಡ ಒಪ್ಪುವುದಿಲ್ಲ. ಇತಿಹಾಸದ ಪ್ರತಿಯೊಂದು ಯುದ್ದವು ಭೂಮಿಗಾಗಿ ಜರಗುತ್ತಿದ್ದು, ಭೂಮಿ ಹಕ್ಕಿನ ಸಮಸ್ಯೆ ಬಗೆಹರಿದಾಗಲೇ ದೇಶದಲ್ಲಿ ಶಾಂತಿ ನೆಲೆಸಲು ಸಾಧ್ಯ. ಸಮಸ್ಯೆ ಬಗೆಹರಿಯುವರೆಗೂ ಹೋರಾಟ ಸಹ ನಿಲ್ಲುವುದಿಲ್ಲ ಎಂದು ಹೇಳಿದರು.

ಸ್ವಾಗತ ಮತ್ತು ಪ್ರಸ್ತಾವನೆ ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಮಾಡಿದರು.

ಸಭೆಯನ್ನು ಉದ್ದೇಶಿಸಿ ಜಿಲ್ಲಾ ಸಂಚಾಲಕ  ಜಿ ಎಮ್ ಶೆಟ್ಟಿ, ಶಿರಸಿ ವಕೀಲ ಸಂಘದ ಅಧ್ಯಕ್ಷ ಈರೇಶ್, ಸಿದ್ಧಾಪುರ ರೈತ ಸಂಘದ ಅಧ್ಯಕ್ಷ ವೀರಭದ್ರ ನಾಯ್ಕ ಮುಂತಾದವರು ಮಾತನಾಡಿದರು.

ವೇದಿಕೆಯಲ್ಲಿ ಮುಂಡಗೋಡ ಅಧ್ಯಕ್ಷ ಶಿವಾನಂದ ಜೋಗಿ, ಶಿರಸಿ ಅಧ್ಯಕ್ಷ ಲಕ್ಷ್ಮಣ ಮಾಳ್ಳಕ್ಕನವರ, ರಾಮು ಗೌಳಿ, ಎಸ್.ಎಮ್ ಪಾಟೀಲ್, ಸಾಸನ್ ದಾಡೇಲಿ, ರಿಜವಾನ್, ಕುಮಟ ತಾಲೂಕ ಅಧ್ಯಕ್ಷ ಮಂಜುನಾಥ ಮರಾಠಿ, ಶಬ್ಬೀರ್ ಚಪಾತಿ, ಶೇಖಯ್ಯ ಹಿರೇಮಠ, ಇಬ್ರಾಹಿಂ ಗೌಡಳ್ಳಿ, ರಾಜು ನರೇಬೈಲ್ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರ್ವಹಣೆಯನ್ನು ಬಾಲಚಂದ್ರ ಶೆಟ್ಟಿ ಅವರು ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News