ಸುಳ್ಯ: ಯುವಕನ ಮೇಲೆ ತಂಡದಿಂದ ಗುಂಡಿನ ದಾಳಿ

Update: 2022-06-06 03:56 GMT

ಸುಳ್ಯ: ಮಾಣಿ – ಮೈಸೂರು ಹೆದ್ದಾರಿಯ ಸುಳ್ಯ ಪೇಟೆ ಬಳಿ ಕಾರಿನಲ್ಲಿ ಬಂದ ತಂಡವೊಂದು ಯುವಕನ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆ ನಿನ್ನೆ ರಾತ್ರಿ ನಡೆದಿದೆ.

ಸುಳ್ಯ ತಾಲೂಕಿನ ಸುಳ್ಯ ಕಸಬಾ ಗ್ರಾಮದ ಜಯನಗರ ನಿವಾಸಿ ಮಹಮ್ಮದ್ ಸಾಯಿ (39) ಗುಂಡಿನ ದಾಳಿಗೆ ಒಳಗಾಗಿದ್ದು, ಅವರನ್ನು  ಆಸ್ಪತ್ರೆಗೆ ದಾಖಲಿಸಲಾಗಿದೆ.

ಸುಳ್ಯದ ಜ್ಯೋತಿ ಸರ್ಕಲ್‌ ಸಮೀಪ ವೆಂಕಟರಮಣ ಸೊಸೈಟಿ ಬಳಿ ಮಹಮ್ಮದ್ ಸಾಯಿ ಅವರು ತನ್ನ ಹುಂಡೈ ಕ್ರೆಟಾ ಕಾರನ್ನು ನಿಲ್ಲಿಸಿ ಪಕ್ಕದಲ್ಲಿರುವ ತನ್ನ ತಂಗಿಯ ಮನೆಗೆ ಹೋಗಿ ವಾಪಸ್ಸು ಕಾರಿನ ಬಳಿ ಬರುತ್ತಿದ್ದಂತೆ ಗುಂಡಿನ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.

ಸ್ಕಾರ್ಪಿಯೋದಲ್ಲಿ ಬಂದ ದುಷ್ಕರ್ಮಿಗಳ ತಂಡ ಮಹಮ್ಮದ್ ಸಾಯಿಯವರ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದೆ ಎಂದು ದೂರಲಾಗಿದೆ.

ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಐಪಿಸಿ ಕಲಂ: 307 34 ಐಪಿಸಿ ಮತ್ತು ಕಲಂ 25 27 ಆರ್ಮ್ಸ್‌ ಆಕ್ಟ್ ನಂತೆ ಪ್ರಕರಣ ದಾಖಲಿಸಿಕೊಂಡಿದ್ದು, ಸರ್ಕಲ್ ಇನ್ಸ್ ಪೆಕ್ಟರ್ ನವೀನ್ ಚಂದ್ರ ಜೋಗಿ ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News