ಕೊಲ್ನಾಡು | ಎಸ್ಕೆಎಸ್ಸೆಸ್ಸೆಫ್ ‌ನಿಂದ 'ಮನೆಗೊಂದು ಸಸಿ' ಅಭಿಯಾನಕ್ಕೆ ಚಾಲನೆ

Update: 2022-06-06 07:10 GMT

ಮುಲ್ಕಿ, ಜೂ.5: ಎಸ್ಕೆಎಸ್ಸೆಸ್ಸೆಫ್ ಕೊಲ್ನಾಡು ಶಾಖೆಯ ವತಿಯಿಂದ ರವಿವಾರ ವಿಶ್ವ ಪರಿಸರ ದಿನಾಚರಣೆಯನ್ನು ಮನೆಗೊಂದು ಸಸಿ ಅಭಿಯಾನ ಆರಂಭಿಸುವ ಮೂಲಕ ಆಚರಿಸಲಾಯಿತು.

ಶಾಖೆಯ ಅಧ್ಯಕ್ಷ ಯಾಸಿರ್ ಅರಾಫತ್ ಮುಲ್ಕಿ ಇವರು ಕೊಲ್ನಾಡು ಪರಿಸರದ ಹಿರಿಯರಾದ ಇಬ್ರಾಹೀಂರಿಗೆ ಸಸಿ ಹಸ್ತಾಂತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ‌ ನೀಡಿದರು.

ಇರ್ಷಾದ್ ಕೆರೆಕಾಡು ಪ್ರಾಸ್ತಾವಿಕ ಮಾತುಗಳನ್ನಾಡಿ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಿದರು. ನಂತರ ಎಸ್ಕೆಎಸ್ಸೆಸ್ಸೆಫ್ ಮುಲ್ಕಿ ಕ್ಲಸ್ಟರ್ ಇದರ ಅಧ್ಯಕ್ಷ ಎಂ.ಇಸ್ಮಾಯೀಲ್ ಕೊಲ್ನಾಡು ನೇತೃತ್ವದಲ್ಲಿ ಕೊಲ್ನಾಡು ಖಬರ್ ಸ್ಥಾನದಲ್ಲಿ ತೆಂಗಿನಸಸಿಗಳನ್ನು ನೆಡುವ ಮೂಲಕ ಮನೆಗೊಂದು ಸಸಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಶಾಖಾ ಪದಾಧಿಕಾರಿಗಳಾದ ಶಹೀರ್, ಇಮ್ರಾನ್, ನೌಫಲ್ ಕೊಲ್ನಾಡ್ ಉಪಸ್ಥಿತರಿದ್ದರು. ಕಾರ್ಯದರ್ಶಿ ರಾಹಿಲ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News